ಮೈಸೂರು: ಆಳುವ ಸರ್ಕಾರ, ಅದರಲ್ಲೂ ನಮ್ಮ ಊರಿನವರೇ ಆಗಿರುವ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರು ಮೈಸೂರಿನ ಮೇಲಿನ ಮಮತೆಯಿಂದ ಗ್ರೇಟರ್ ಮೈಸೂರು ಯೋಜನೆಯನ್ನು ಜಾರಿಗೆ ತರುವ ಯೋಚನೆ ನಡೆಸುತ್ತಿದ್ದಾರೆ. ಈ ಯೋಜನೆ ಸರ್ಕಾರಕ್ಕೂ ಮತ್ತು ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂತಸ ತಂದಿರಬಹುದು, ಆದರೆ ಮೈಸೂರು ಜನತೆಗೆ ಇದು ಮಾರಕವಾದ ಯೋಜನೆ ಆಗಲಿದೆ. ಆದ್ದರಿಂದ ಈ ಎಲ್ಲಾ ಯೋಜನೆಗಳನ್ನು ತಾತ್ಕಾಲಿಕವಾಗಿ ಬದಿಗಿಟ್ಟು, ಮೈಸೂರಿನ ಜನತೆಗೆ ನಿಜವಾಗಿ ಅಗತ್ಯವಿರುವ ಮೂಲಭೂತ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರೆ ಸರ್ಕಾರದ ಆದ್ಯ ಕರ್ತವ್ಯವಾಗುತ್ತದೆ

ಮೈಸೂರಿನ ಸಂಸದ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೂಡ ಮೇಲ್ಸೇತುವೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಉಲ್ಲೇಖಿಸಿರುವ ವಿನೋಬಾ ರಸ್ತೆ ಮತ್ತು ಜೆ.ಎಲ್.ಬಿ. ರಸ್ತೆಗಳಲ್ಲಿ ಪಾರಂಪರಿಕ ಕಟ್ಟಡಗಳಿದ್ದು ಜೊತೆಗೆ ರಸ್ತೆಯಲ್ಲಿ ಭೂಗತ ನೀರಿನ ಪೈಪ್‌ ಲೈನ್‌ಗಳು ಹಾದುಹೋಗಿವೆ. ಇಂತಹ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದು ಅವೈಜ್ಞಾನಿಕ ಮತ್ತು ಅಪಾಯಕಾರಿ ಯೋಜನೆಯಾಗುತ್ತದೆ.

ನಿಜಕ್ಕೂ ಮೈಸೂರು ಜನತೆಗೆ ಬೇಕಾಗಿರುವುದು. ಅಪರಾಧ ರಹಿತ ಮತ್ತು ಸುಂದರವಾದ ಪಾರಂಪರಿಕವಾದ ಮೈಸೂರು ಉಳಿಯಬೇಕಾದರೆ ಫುಟ್‌ಪಾತ್ ವ್ಯಾಪಾರಿಗಳ ಆತಿಕ್ರಮಣ, ತಳ್ಳುವ ಗಾಡಿಗಳ ಹಾವಳಿ ಮತ್ತು ಅಕ್ರಮ ಅಂಗಡಿಗಳ ಸಮಸ್ಯೆ ಪರಿಹರಿಸಿದರೆ ನಗರ ಸುಂದರವಾಗುತ್ತದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ. ಇವೆಲ್ಲವು ಸುಲಲಿತವಾಗಿ ನಡೆಯಬೇಕಾದರೆ ಮಾನ್ಯ ಮುಖ್ಯಮಂತ್ರಿಗಳು ಮೈಸೂರಿನ ಅಭಿವೃದ್ಧಿಗೆ ನಿಜವಾದ ಬದ್ಧತೆಯುಳ್ಳವರಾದರೆ, ಮೈಸೂರು ಮಹಾನಗರ ಪಾಲಿಕೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಲಂಚರಹಿತವಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು. ಇದರಿಂದ ಮೈಸೂರು ನಗರ ನಿಜವಾದ ಬದಲಾವಣೆಯಾಗುತ್ತದೆ.

ಮೈಸೂರು ರಕ್ಷಣಾ ವೇದಿಕೆಯು ಮತ್ತೊಮ್ಮೆ ಸರ್ಕಾರವನ್ನು ಮನವಿ ಮಾಡುತ್ತದೆ ಗ್ರೇಟರ್ ಮೈಸೂರು ಯೋಜನೆಯನ್ನು ಜಾರಿಗೊಳಿಸುವ ಬದಲು, ಮೈಸೂರನ್ನು ಎರಡು ಭಾಗಗಳಾಗಿ ಮೈಸೂರು 1 ಮತ್ತು ಮೈಸೂರು 2 ವಿಭಾಗಿಸಿ ಅಭಿವೃದ್ಧಿ ಕಾರ್ಯಗಳನ್ನು ಸಮನ್ವಯಗೊಳಿಸಬಹುದು. ಆದರೆ ಹಳೆಯ ಮೈಸೂರಿನ ಪಾರಂಪರಿಕ ಪ್ರದೇಶಗಳಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳದೆ, ಕುಡಿಯುವ ನೀರು, ಒಳಚರಂಡಿ, ಕಸದ ನಿರ್ವಹಣೆ, ಮತ್ತು ಉತ್ತಮ ರಸ್ತೆಗಳ ನಿರ್ಮಾಣ ಮಾಡಿದರೆ ಇದೇ ನಿಜವಾದ ಅಭಿವೃದ್ಧಿ ಎಂದು ಹೇಳಿದರು.