ಮೈಸೂರು: ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಪ್ರಾಪರ್ಟಿ ರಿಟರ್ನ್ ಪೆರೇಡ್ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಳುವಾದ ಪದಾರ್ಥಗಳನ್ನ ಮಾಲೀಕರಿಗೆ ಹಿಂದಿರುಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್,ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿರವರಾದ ಮುತ್ತುರಾಜ್,ಸಂಚಾರ ಮತ್ತು ಅಪರಾಧ ಡಿಸಿಪಿರವರರಾದ ಸುಂದರ್ ರಾಜ್ ನೇತೃತ್ವದಲ್ಲಿ ಕಳುವು ಪದಾರ್ಥಗಳನ್ನ ಮಾಲೀಕರಿಗೆ ಹಿಂದಿರುಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕಳೆದ 8 ತಿಂಗಳಲ್ಲಿ ನಡೆದ ಅಪರಾಧ ಪ್ರಕರಣಗಳನ್ನ ಪತ್ತೆ ಹಚ್ಚಿದ ವಿವಿಧ ಠಾಣೆಗಳ ಪ್ರಕರಣಗಳ ಸ್ವತ್ತನ್ನ ಪ್ರದರ್ಶಿಸಿ ಮಾಲೀಕರಿಗೆ ಹಿಂದಿರುಗಿಸಲಾಯಿತು. 8 ತಿಂಗಳಲ್ಲಿ 2 ದರೋಡೆ, 4 ಸುಲಿಗೆ, 21 ಸರಗಳ್ಳತನ, 34 ಕನ್ನಕಳುವು, 6 ಮನೆ ಕಳುವು,
69 ವಾಹನ ಕಳುವು,13 ಸಾಮಾನ್ಯ ಕಳುವು ಪ್ರಕರಣಗಳನ್ನ ಪತ್ತೆಮಾಡಿ 20 ಆರೋಪಿಗಳನ್ನ ದಸ್ತಗಿರಿ ಮಾಡಲಾಗಿದೆ. 4,23,60000/- ಮೌಲ್ಯದ 5 ಕೆಜಿ 320 ಗ್ರಾಂ ಚಿನ್ನಾಭರಣ, 6 ಕೆಜಿ 245 ಗ್ರಾಂ ಬೆಳ್ಳಿ ಪದಾರ್ಥಗಳನ್ನ ಅಮಾನತುಪಡಿಸಿಕೊಳ್ಳಲಾಗಿದೆ. ದಸ್ತಗಿರಿಯಾದ 20 ಆರೋಪಿಗಳ ಪೈಕಿ ಇಬ್ಬರು ಅಂತರಾಜ್ಯ ಆರೋಪಿಗಳಾಗಿದ್ದಾರೆ.

ಪ್ರಮುಖವಾಗಿ ಸಿಸಿಬಿ ಪೊಲೀಸರು 4 ಆರೋಪಿಗಳನ್ನ ಬಂಧಿಸಿ 62,71,500/- ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 5 ವಾಹನ, ಒಂದು ಪಿಸ್ತೂಲ್ ಎರಡು ಜೀವಂತ ಗುಂಡು ಅಮಾನತುಪಡಿಸಿಕೊಂಡಿದ್ದಾರೆ.
ಸರಸ್ವತಿಪುರಂ ಠಾಣೆ ಪೊಲೀಸರು ಓರ್ವ ಕನ್ನಕಳುವು ಆರೋಪಿಯನ್ನ ಬಂಧಿಸಿ 38.82 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆಲನಹಳ್ಳಿ ಠಾಣೆ ಪೊಲೀಸರು 4 ಆರೋಪಿಗಳನ್ನ ಬಂಧಿಸಿ 15 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

