ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾದ ಹಿನ್ನಲೆ ಮೈಸೂರು ಸಿಟಿ ಪೊಲೀಸರು ಫೀಲ್ಡ್‌ಗಿಳಿದಿದ್ದಾರೆ.
ಸಮಾಜಘಾತುಕ ಶಕ್ತಿ ನಿಗ್ರಹಕ್ಕೆ ಪೊಲೀಸರ ಪೆರೇಡ್ ನಡೆಸಿದರು. ಜಯಲಕ್ಷ್ಮಿಪುರಂ, ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಪೆರೆಡ್ ನಡೆಸಿದ್ದು, ರೌಡಿಶೀಟರ್ ಗಳಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು.
ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಹಾಡುಹಗಲೇ ನಗರದ ಹೃದಯ ಭಾಗದಲ್ಲೇ ಕೊಲೆ, ಅತ್ಯಾಚಾರ, ಕಳ್ಳತನದಂತಹ ಘಟನೆಗಳು ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡೋದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ. ಹೀಗಾಗಿ ರೌಡಿಗಳಿಗೆ ಪರೇಡ್ ನಡೆಸಿ ಖಾಕಿ ಪಡೆ ಬಿಸಿಮುಟ್ಟಿಸಿದೆ.

