ಮೈಸೂರು: ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ವಿರೋಧಿಸಿ ನಾಳೆ ಅಂಬೇಡ್ಕರ್ ಅಭಿಮಾನಿ ಸಂಘದಿಂದ ಕರೆಕೊಟ್ಟಿದ್ದ ಮೈಸೂರು ಬಂದ್ ಗೆ ಹಲವು ಸಂಘಟನೆಗಳ ಬೆಂಬಲ ವ್ಯಕ್ತಪಡಿಸಿವೆ.

ಕರ್ನಾಟಕ ರಾಜ್ಯ ರೈತ ಸಂಘಟನೆಗಳು, ದಲಿತ ಸಂಘಟನೆಗಳು,ಮುಸ್ಲಿಂ , ಹಿಂದುಳಿದ ಸಮುದಾಯಗಳ ವೇದಿಕೆ, ದೇವರಾಜ ಮಾರುಕಟ್ಟೆ ವರ್ತಕರ ಸಂಘ,ಮೈಸೂರು ಪಾಲಿಕೆ ಪೌರಕಾರ್ಮಿಕ ಹಾಗೂ ಪಳಚರಂಡಿ ಖಾಯಂ ಹಾಗೂ ಗುತ್ತಿಗೆ ಕಾರ್ಮಿಕ ಸಂಘಗಳು ನೇರವಾಗಿ ಬೆಂಬಲ ವ್ಯಕ್ತಪಡಿಸಿದರೆ.

ಹೋಟೆಲ್ ಮಾಲೀಕರ ಸಂಘ,ಲಾರಿ ಮಾಲಿಕರು ಹಾಗೂ ಚಾಲಕರ ಸಂಘ ,ಬಸ್ ಮಾಲೀಕರ ಸಂಘ ,ಅಟೋ ಮಾಲೀಕರ ಸಂಘ ಹಾಗೂ ಇತರೆ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ.

ನಾಳೆ ಮುಂಜಾನೆ 7 ಗಂಟೆಯಿಂದಲೆ ಮೈಸೂರು ಬಂದ್ ಬಿಸಿ ತಟ್ಟಲಿದ್ದು ಪ್ರತಿಭಟನೆಗೆ ಹಲವು ಸಂಘಟನೆಗಳ 10 ತಂಡ ಮಾರ್ಪಾಡು ಮಾಡಿಕೊಳ್ಳಲಾಗಿದೆ. ಕೆಂದ್ರೀಯ ಬಸ್ ನಿಲ್ದಾಣದಲ್ಲಿ ಒಂದು ತಂಡ ,ನಗರ ಬಸ್ ನಿಲ್ದಾಣದಲ್ಲಿ ಒಂದು ತಂಡ ಹೀಗೆ ಮೈಸೂರು ನಗರಕ್ಕೆ ಬರುವ ಪ್ರಮುಖ ರಸ್ತೆ ತಡೆಗೆ ಯೋಚನೆ ಮಾಡಲಾಗಿದೆ.