ಮೈಸೂರು: ಹನುಮ ಮಾಲೆ ಸಂಕೀರ್ತನಾ ಯಾತ್ರೆಗೆ ಅನುಮತಿ ನೀಡಬಾರದು ಎಂಬ ಮುಸ್ಲಿಂ ಸಮುದಾಯದ ಮನವಿ ವಿಚಾರವಾಗಿ ಹಿಂದೂ ಜಾಗರಣ ವೇದಿಕೆಯ ಲೋಹಿತ್ ಅರಸ್ ಹೇಳಿಕೆ ನೀಡಿದ್ದಾರೆ.

ಪ್ರತಿ ವರ್ಷ ಈ ಶಾಂತ ರೀತಿಯಿಂದ ಆಚರಣೆ ಮಾಡುತ್ತಿದ್ದೇವೆ. ಕೆಲವರು ಈ ಹಬ್ಬವನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ. 144 ಸೆಕ್ಷನ್ ಹಾಕಿ ಅಂತಾರೆ ಬಹಳ ವರ್ಷ ದಿಂದ ಹಬ್ಬ ಆಗುತ್ತಿದೆ
ನಮ್ಮಿಂದ ಯಾವುದೇ ತಪ್ಪು ಆಗಿಲ್ಲ ಆದರೂ ನಿರಂತರವಾಗಿ ನಿಲ್ಲಿಸೋಕೆ ಪ್ರಯತ್ನ ಮಡುತ್ತಿದ್ದಾರೆ ಎಂದರು.

ಲವ್ ಜಿಹಾದ್ ರೀತಿ ಹಿಂದೂ ಹಬ್ಬ ನಿಲ್ಲಿಸುವ ಫೆಸ್ಟಿವಲ್ ಜಿಹಾದ್. ಗಣೇಶ ಉತ್ಸವ ಮಾಡಿದರೆ ಕಲ್ಲು ಹೊಡೆಯುತ್ತಾರೆ. ಹಿಂದೂ ಹಬ್ಬ ನಿಲ್ಲಿಸೋದು ಹಿಂದೂಗಳು ತಮ್ಮ ಹಬ್ಬ ಆಚರಣೆ ಮಾಡಲು ಭಯದ ವಾತಾವರಣ ಸೃಷ್ಟಿ ಮಾಡುವುದು ಇದರ ಉದ್ದೇಶ. ಹನುಮನ ರೋಮ‌ ಕೆದಕಿದರೆ ರಾಕ್ಷಸರ ಲಂಕೆ ಸುಟ್ಟು ಹೊಗುತ್ತೆ ಎಂದು ಹಿಂದೂ ಜಾಗರಣ ವೇದಿಕೆಯ ಲೋಹಿತ್ ಅರಸ್ ಹೇಳಿಕೆ ನೀಡಿದ್ದಾರೆ.