ಮೈಸೂರು : ಶಾಸಕ ತನ್ವಿರ್ ಗೆ ಸಚಿವ ಸ್ಥಾನ ಕೈ ತಪ್ಪಿದೆ. ತನ್ವಿರ್ ಬೆಂಬಲಿಗರಿಂದ ರಸ್ತೆ ತಡೆದು ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ವೇಳೆ ಪೆಟ್ರೋಲ್ ಸುರಿದುಕೊಳ್ಳಲು ತನ್ವಿರ್ ಬೆಂಬಲಿಗ ಮುಂದಾದರು. ತನ್ವಿರ್ ಬೆಂಬಲಿಗನ ಕೈಯಿಂದ ಪೆಟ್ರೋಲ್ ಬಾಟಲ್ ಪೊಲೀಸರು ಕಸಿದರು. ರಸ್ತೆ ಮಧ್ಯೆಯಲ್ಲೇ ಕುಳಿತು ತನ್ವಿರ್ ಬೆಂಬಲಗರು ಪ್ರತಿಭಟನೆ ನಡೆತ್ತಿದ್ದಾರೆ. ದಿಡೀರ್ ಪ್ರತಿಭಟನೆಯಿಂದ ಕೆಲಕಾಲ ಸಂಚಾರ ಅಸ್ತ್ಯವ್ಯಸ್ತವಾಯಿತು.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತನ್ವಿರ್ ಬೆಂಬಲಿಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಬಲಿಗನ ಆರೋಗ್ಯವನ್ನು ಶಾಸಕ ತನ್ವಿರ್ ಸೇಠ್ ವಿಚಾರಿಸಿದರು. ತನ್ವಿರ್ ಸೇಠ್ ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಭಿಮಾನಿ ವಿಷ ಕುಡಿದಿದ್ದಾರೆ.

ಶಾಸಕ ತನ್ವಿರ್ ಸೇಠ್ ಬೆಂಬಲಿಗರನ್ನ ಪೊಲೀಸರು ವಶಕ್ಕೆ ಪಡೆದರು. ಹೆದ್ದಾರಿ ತಡೆದು ತನ್ವಿರ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರು. ದಿಡೀರ್ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ. ಮೈಸೂರಿನ ಮಣಿಪಾಲ್ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.