ಮೈಸೂರು: ಮುಡಾದಲ್ಲಿ ಶಾಸಕ ಜಿ ಟಿ ದೇವೇಗೌಡ ಅಕ್ರಮ ಪ್ರಭಾವ ಬೀರಿರುವ ಆರೋಪ. ತಪ್ಪು ಮಾಡಿದ್ದರೆ ತನಿಖೆಯಾಗಿ ಕ್ರಮ ಕೈಗೊಳ್ಳಲಿ ನನ್ನದೇನು ಅಭ್ಯಂತರ ಇಲ್ಲ ಎಂದು ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಸ್ನೇಹಮಯಿ ಕೃಷ್ಣ ನಮ್ಮ ಹುಡುಗನೇ ಒಳ್ಳೆ ಕೆಲಸ ಮಾಡುತ್ತಿದ್ದಾನೆ. ರಾಜಕಾರಣಿಗಳು, ಅಧಿಕಾರಿಗಳು ತಪ್ಪು ಮಾಡಿದರೆ ಅವರಿಗೆ ಶಿಕ್ಷಯಾಗಲಿ ಅಂತಾ ಹೋರಾಟ ಮಾಡುತ್ತಿದ್ದಾನೆ.
ಅವನಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ನನ್ನ ಮಗಳು ಅಳಿಯ 50:50 ಸೈಟ್ ಪಡೆದವರಿಂದ ವೈಟ್ ಮನಿ ಕೊಟ್ಟು ಸೈಟ್ ಖರೀದಿಸಿದ್ದಾರೆ. ಈ ಬಗ್ಗೆ ನನಗೆ ಗೊತ್ತಿರಲಿಲ್ಲ ಇಂದು ಬೆಳಗ್ಗೆ ಮಗಳಿಗೆ ಕರೆ ಮಾಡಿ ವಿಚಾರ ತಿಳಿದುಕೊಂಡೆ. ಈ ಪ್ರಕರಣವನ್ನು ಲೋಕಾಯುಕ್ತರಿಗೆ ಕೊಟ್ಟಿದ್ದರೆ ಸಂತೋಷ. ತಪ್ಪು ಮಾಡಿದ್ದರೆ ತನಿಖೆ ಪ್ರಾರಂಭಿಸಲಿ.
ಸೈಟ್ ಪಡೆದು ಮಾರಾಟ ಮಾಡಿದವರಿಗೆ ಮಾರಾಟ ಮಾಡಲು ಹಕ್ಕಿದೆ. ನನ್ನ ಮಗಳು ಯಾರು ಜೊತೆ ಮಾತಾಡಿ ಸೈಟ್ ತೆಗೆದುಕೊಂಡಿದ್ದರೋ ಗೊತ್ತಿಲ್ಲ. ಪ್ರಭಾವ ಅಕ್ರಮ ಆರೋಪ ತನಿಖೆಯಿಂದ ಗೊತ್ತಾಗಲಿದೆ ಎಂದು ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ.
ನಾಳಿನ ಜೆಡಿಎಸ್ ಪಕ್ಷದ ಸಭೆಗೆ ಹಾಜರಾಗುವ ವಿಚಾರವಾಗಿ ಮಾತನಾಡಿ, ನಾನು ಕ್ಷೇತ್ರದ ಅಭಿವೃದ್ಧಿಗೆ ಓಡಾಟ ಮಾಡುತ್ತಿದ್ದೇನೆ. ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗ್ತಿಲ್ಲ ಅನ್ನೋ ಕಾರಣಕ್ಕೆ ಹೋಗ್ತಿಲ್ಲ. ಇದನ್ನ ಹೊರತುಪಡಿಸಿದ್ರೆ ಯಾವುದೇ ಬೇಸರ ಇಲ್ಲ. ದಿಶಾ ಸಭೆಗೆ ನಮ್ಮ ನಾಯಕರು ಬಂದ ವೇಳೆ ಹೋಗಬೇಕಿತ್ತು. ಕೆಲ ಕಾರಣಗಳಿಂದ ಹೋಗಲು ಸಾಧ್ಯವಾಗಲಿಲ್ಲ.
ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿ ದೇವೇಗೌಡರು ಹಿರಿಯರಿದ್ದಾರೆ. ಕುಮಾರಸ್ವಾಮಿಯವರು ಎರಡು ಸಿಎಂ ಆಗಿದ್ದವರು. ಎಲ್ಲರು ಸೇರಿ ಯಾರನ್ನ ಮಾಡ್ತಾರೆ ಅವರು ಅಧ್ಯಕ್ಷರಾಗುತ್ತಾರೆ. ನನ್ನ ಮಗ ಜಿಡಿ ಹರೀಶ್ ಗೌಡ ನಿಖಿಲ್ ಕುಮಾರಸ್ವಾಮಿ ಸ್ನೇಹಿತರು. ಆಗಾಗಿ ಅವರು ನಿಖಿಲ್ ರಾಜ್ಯಾಧ್ಯಕ್ಷರಾಗಿ ಅನ್ನೋ ಆಸೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪೇನು ಎಂದು ಶಾಸಕ ಜಿಟಿ ದೇವೇಗೌಡ ಹೇಳಿಕೆ ನೀಡಿದರು.
ನಾಳೆ ಜೆಡಿಎಸ್ ರಾಜ್ಯಾಧ್ಯಕ್ಷ ಆಯ್ಕೆ ಸಭೆ ವಿಚಾರವಾಗಿ ನಾನು ಸಭೆಯಲ್ಲಿ ಭಾಗಿಯಾಗುವುದಿಲ್ಲ. ನಾನು ಕ್ಷೇತ್ರದ ಅಭಿವೃದ್ಧಿಗೆ ಓಡಾಟ ಮಾಡುತ್ತಿದ್ದೇನೆ. ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ. ಈ ಕಾರಣಕ್ಕೆ ಹೋಗುತ್ತಿಲ್ಲ. ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಬೇಸರ ಇಲ್ಲ. ದಿಶಾ ಸಭೆಗೆ ನಮ್ಮ ನಾಯಕರು ಬಂದ ವೇಳೆ ಹೋಗಬೇಕಿತ್ತು. ಆರೋಗ್ಯ ಸರಿ ಇಲ್ಲದ ಕಾರಣಗಳಿಂದ ಹೋಗಲು ಸಾಧ್ಯವಾಗಲಿಲ್ಲ. ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿ ದೇವೇಗೌಡರು ಹಿರಿಯರಿದ್ದಾರೆ.
ಕುಮಾರಸ್ವಾಮಿಯವರು ಎರಡು ಬಾರಿ ಸಿಎಂ ಆಗಿದ್ದವರು. ಎಲ್ಲರೂ ಸೇರಿ ಯಾರನ್ನು ಮಾಡುತ್ತಾರೆ ಅವರು ಅಧ್ಯಕ್ಷರಾಗುತ್ತಾರೆ. ನನ್ನ ಮಗ ಜಿಡಿ ಹರೀಶ್ ಗೌಡ ನಿಖಿಲ್ ಕುಮಾರಸ್ವಾಮಿ ಸ್ನೇಹಿತರು. ಆಗಾಗಿ ಅವರು ನಿಖಿಲ್ ರಾಜ್ಯಾಧ್ಯಕ್ಷರಾಗಲಿ ಅನ್ನೋ ಆಸೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪೇನು ? ಎಂದು ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಹೇಳಿಕೆ ನೀಡಿದರು.
2028ಕ್ಕೆ ಸಿಎಂ ಆಗುತ್ತೇನೆ ಸತೀಶ್ ಜಾರಕಿಹೊಳಿ, ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ರೀತಿ ಯಾರೇ ಹೇಳಿದ್ರು ಅದು ಭ್ರಮೆ. 2028ಕ್ಕೆ ಏನಾಗುತ್ತೆ ಎಂದು ಹೇಳಲು ಈಗ ಸಾಧ್ಯವಿಲ್ಲ. ಸಿಎಂ ಆಗಬೇಕಾದ್ರೆ ಜನ ಮತ ಹಾಕಬೇಕು. ಶಾಸಕರು ಸಿಎಂ ಆಯ್ಕೆ ಮಾಡಬೇಕು. ಸುಮ್ನೆ ಸಿಎಂ ಆಗುತ್ತೇನೆ ಅನ್ನೋದು ಭ್ರಮೆ. ಸದ್ಯದ ಪರಿಸ್ಥಿತಿಯಲ್ಲಿ 2028ಕ್ಕೆ ಸಿಎಂ ಯಾರಾಗುತ್ತಾರೆ ಅಂತ ಹೇಳಲಿಕ್ಕೆ ನಾನು ಜ್ಯೋತಿಷಿ ಅಲ್ಲ.
ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಹೇಳಿದ್ದೆ. ಅದು ಜನರ ಅಭಿಪ್ರಾಯವನ್ನ ಸಂಗ್ರಹಿಸಿ ಹೇಳಿದ್ದು. ಈಗ ಸಿಎಂ ಯಾರಾಗ್ತಾರೆ ಎಂದು ಹೇಳುವ ಪರಿಸ್ಥಿತಿ ಇಲ್ಲ. ನನಗೆ ಸಿಎಂ ಆಗುವ ಆಸೆ ಇಲ್ಲ. ಸಿಎಂ ಆಗಲು ಖರ್ಚು ಮಾಡಬೇಕಾದಷ್ಟು ಹಣವು ನನ್ನ ಬಳಿ ಇಲ್ಲ. ಕೆಲವರು ಸಿಎಂ ಆಗೋ ಕಾರಣಕ್ಕೆ ಹಣ ಖರ್ಚು ಮಾಡಿ ಕಾದಿದ್ದಾರೆ. ಆ ಶಕ್ತಿ ನನ್ನ ಬಳಿ ಇಲ್ಲ ಎಂದರು.
ಎಂಎಲ್ ಸಿ ಸಿಟಿ ರವಿಗೆ ಬೆದರಿಕೆ ಪತ್ರ ವಿಚಾರವಾಗಿ ಮಾತನಾಡಿ, ಯಾರೇ ಪತ್ರ ಬರೆದಿದ್ರು ಅವರನ್ನ ಜೈಲಿಗೆ ಹಾಕಬೇಕು. ಈ ರೀತಿ ಯಾರಾದ್ರೂ ಪತ್ರ ಬರೆದಿದ್ರೆ ಅದು ಯಾರು ಅಂತ ಪತ್ತೆ ಹಚ್ಚಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಜನಪ್ರತಿನಿದಿಗಳಾದವರಿಗೆ ಸಹನೆ ತಾಳ್ಮೆ ಇರಬೇಕು. ಜನಪ್ರತಿನಿದಿನಗಳಿಗೆ ಕಿವಿ ಮಾತು ಹೇಳಿದ ಶಾಸಕ ಜಿಟಿ ದೇವೇಗೌಡ. ಸಾರ್ವಜನಿಕವಾಗಿ ನಮ್ಮ ವಿರುದ್ಧ ಟೀಕೆ ಮಾಡಿದಾಗ ಅದನ್ನ ಸಹಿಸಿಕೊಳ್ಳುವ ತಾಳ್ಮೆ ಇರಬೇಕು ಎಂದರು.

