ನಂಜನಗೂಡು: ಜನಪರ ಕಾಳಜಿಯುಳ್ಳ ಜುಬಿಲೆಂಟ್ ಭಾರ್ತಿಯಾ ಫೌಂಡೇಶನ್ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಬಣ್ಣಿಸಿದರು.

ನಂಜನಗೂಡು ತಾಲ್ಲೂಕಿನ ಕತ್ವಾಡಿಪುರ ಗ್ರಾಮದಲ್ಲಿ ದೇಬೂರು ಗ್ರಾ.ಪಂ ಮತ್ತು ಜುಬಿಲೆಂಟ್ ಭಾರ್ತಿಯಾ ಫೌಂಡೇಶನ್ ವತಿಯಿಂದ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮತ್ತು ಚಾಮಲಾಪುರದ ಹುಂಡಿಯ ಎನ್.ಜಿ.ಓ ಕಾಲೋನಿಯಲ್ಲಿ ನಂಜನಗೂಡು ನಗರಸಭೆ ಮತ್ತು ಜುಬಿಲೆಂಟ್ ಭಾರ್ತಿಯಾ ಫೌಂಡೇಶನ್ ವತಿಯಿಂದ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜುಬಿಲೆಂಟ್ ಸಂಸ್ಥೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸುಮಾರು 8 ಲಕ್ಷ ರೂ. ವೆಚ್ಚಗಳ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದ್ದಾರೆ. 5 ರೂಪಾಯಿ ಕಾಯಿನ್ ಹಾಕಿ 20 ಲೀಟರ್ ಶುದ್ದ ಕುಡಿಯುವ ನೀರನ್ನು ಪಡೆದುಕೊಳ್ಳಬಹುದು. ಜುಬಿಲೆಂಟ್ ಭಾರ್ತಿಯಾ ಫೌಂಡೇಶನ್ ಸಿ.ಆರ್.ಎಸ್ ಅನುದಾನದಲ್ಲಿ ವಿವಿಧ ಜನಪರ ಕೆಲಸ ಕಾರ್ಯಗಳನ್ನು ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಅವರ ಕೆಲಸಗಳು ಶ್ಲಾಘನೀಯ. ಸರ್ಕಾರಿ ಶಾಲಾ ಕಟ್ಟಡಗಳನ್ನು ಕಟ್ಟಿ ಮಾದರಿಯಾಗಿದ್ದಾರೆ ಎಂದರು.

ಚಾಮಲಾಪುರದ ಹುಂಡಿ ಮತ್ತು ಕತ್ವಾಡಿಪುರ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ, ನಗರ ಬ್ಲಾಕ್ ಅಧ್ಯಕ್ಷ ಸಿ. ಎಂ ಶಂಕರ್, ನಗರಸಭಾ ಸದಸ್ಯರಾದ ಸಿದ್ದರಾಜು, ಜುಬಿಲೆಂಟ್ ಫಾರ್ವೋವಾ ಲಿಮಿಟೆಡ್ ಉಪಾಧ್ಯಕ್ಷರು ಹಾಗೂ ಘಟಕದ ಮುಖ್ಯಸ್ಥರಾದ ಪ್ರಾಣೇಶ್ ಪ್ರಭಾಕರ ಹೊನ್ನಾವಾಡ್, ಜುಬಿಲೆಂಟ್ ಫಾರ್ವೋವಾ ಲಿಮಿಟೆಡ್ ಮಾನವ ಸಂಪನ್ಮೂಲ ವಿಭಾಗದ ಹಿರಿಯ ನಿರ್ದೇಶಕರಾದ ಎ.ಸುಬ್ರಮಣ್ಯ, ಜುಬಿಲೆಂಟ್ ಇನ್‌ಗ್ರೇವಿಯ ಲಿಮಿಟೆಡ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರದೀಪ್ ಕುಮಾರ್, ಜುಬಿಲೆಂಟ್ ಭಾರ್ತಿಯಾ ಫೌಂಡೇಶನ್ ಹಿರಿಯ ವ್ಯವಸ್ಥಾಪಕರಾದ ಎಸ್. ದೀಪಕ್‌, ಸಹಾಯಕ ವ್ಯವಸ್ಥಾಪಕರಾದ ಆದರ್ಶ ನಿಧಿ ಜೆ, ಕ್ಷೇತ್ರಾಧಿಕಾರಿ ವಿನಯ್ ರಾಜೇ ಅರಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.