ಮೈಸೂರು: ಕಿಡಿಗೇಡಿಗಳು ಕೆಂಪೇಗೌಡ ಭಾವಚಿತ್ರ ಮುರಿದು ಹಾಕಿದ ಘಟನೆ ಮೈಸೂರಿನ ಹೊರ ವಲಯದ ಹಂಚ್ಯಾ ಗ್ರಾಮದಲ್ಲಿ ನಡೆಯಿತು. ಕೆಂಪೇಗೌಡರ ಭಾವಚಿತ್ರ ಕೆಂಪೇಗೌಡ ವೃತ್ತದಲ್ಲಿ ಹಾಕಲಾಗಿತ್ತು. ಭಾವಚಿತ್ರದ ಬೋರ್ಡ್ ಕಿಡಿಗೇಡಿಗಳು ಅನ್ನೆ ಮುರಿದು ಹಾಕಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದರು. ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರ ಹಾಕಿ ಈ ಕೂಡಲೇ ಬಂಧಿಸುವಂತೆ ಒತ್ತಾಯ ಮಾಡಲಾಯಿತು. ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.