ಮೈಸೂರು : ಹುಣಸೂರು ತಾಲ್ಲೂಕಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಬರ ವೀಕ್ಷಣೆ ಮಾಡಿದರು. ಒಣಗಿದ ಬೆಳೆಯನ್ನು ವೀಕ್ಷಣೆ ಮಾಡಿದರು.
ಹುಣಸೂರು ತಾಲೂಕಿನ ಚೋಳೇನಹಳ್ಳಿ, ಹೊಸರಾಮನಹಳ್ಳಿ ಕೆಂಪನಹಳ್ಳಿ ಹುಸೇನ್ಪುರ ಸೇರಿ ಹಲವು ಗ್ರಾಮಗಳ ಜಮೀನು ವೀಕ್ಷಣೆ ಮಾಡಲಾಯಿತು. ಮಳೆ ಇಲ್ಲದೆ ಒಣಗಿದ ಅಲಸಂದೆ ಬೆಳೆಯನ್ನು ಅಧಿಕಾರಿಗಳ ತಂಡದೊಂದಿಗೆ ವೀಕ್ಷಣೆ ಮಾಡಿದರು.
ಈ ವೇಳೆ ಶಾಸಕ ಜಿ.ಡಿ. ಹರೀಶ್ ಗೌಡ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್. ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಕೃಷಿ ಜಂಟೀ ನಿರ್ದೆಶಕ ರವಿ. ತಹಸೀಲ್ದಾರ್ ಮಂಜುನಾಥ್ . ಡಿ.ಡಿ. ಧನಂಜಯ್ ಎಸ್.ಪಿ.ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು ಭಾಗಿಯಾಗಿದ್ದರು.
ಬರ, ಕುಡಿಯುವ ನೀರಿನ ಸಮಸ್ಯೆ ವೀಕ್ಷಿಸಲು ಆಗಮಿಸಿದ್ದ ಸಚಿವರಿಗೆ ಶಾಸಕ ಹರೀಶ್ ಗೌಡ ಸ್ವಾಗತಿಸಿದರು. ಸಚಿವರು ಗ್ರಾಮದಿಂದ ಹೊರಡಲು ಅನುವಾಗುತ್ತಿದ್ದಂತೆ ಮಳೆ ಆರಂಭವಾಯಿತು.

