ತಿ. ನರಸೀಪುರ: ಸುಗಂಧರಾಜ ಹೂವು ಬೆಳೆಗಾರರ ರೈತರಿಂದ ಕಾರ್ಖಾನೆ ಹೂವು ಖರೀದಿಸದ ಹಿನ್ನೆಲೆ ನರಸೀಪುರ ಪಟ್ಟಣದ ಗುರುಭವನದಲ್ಲಿ ತಹಸೀಲ್ದಾರ್ ಸುರೇಶ್ ಆಚಾರ್ ನೇತೃತ್ವದಲ್ಲಿ ರೈತರ ಸಭೆ ನಡೆಸಲಾಯಿತು.

ನ್ಯಾಚುರಲ್ ಎಸೆನ್ಸಿಯಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ರೈತರಿಂದ ಹೂವು ಖರೀದಿ ಮಾಡುತ್ತಿಲ್ಲ. ಸ್ಥಳೀಯ ರೈತರಿಂದಲೇ ಹೂವು ಖರೀದಿ ಮಾಡದ ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಸಭೆಯಲ್ಲಿ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಾಂತ, ಕಾರ್ಖಾನೆ ವ್ಯವಸ್ಥಾಪಕರು, ರೈತ ಮುಖಂಡರುಗಳಾದ ಕೆಬ್ಬೆಹುಂಡಿ ಶಿವಕುಮಾರ್, ಮೇಗಡಹಳ್ಳಿ ಶಿವರಾಮ್, ಬೆನಕನಹಳ್ಳಿ ವಿಜಯ್ ಕುಮಾರ್, ಕುರುಬೂರು ಸಿದ್ದೇಶ್, ಕರೋಹಟ್ಟಿ ಕುಮಾರಸ್ವಾಮಿ, ಕಿರಗಸೂರು ಶಂಕರ್, ಸೇರಿದಂತೆ ಮತ್ತಿತರರು ಇದ್ದರು.