ನಂಜನಗೂಡು: ವೈದ್ಯೆಯೊಬ್ಬರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಸಮಸ್ಯೆ ಉಲ್ಭಣವಾಗಿ ರೋಗಿ ICU ದಾಖಲಾದ ಆರೋಪ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ಚಿಕಿತ್ಸೆ ನೀಡಿದ ಬಗ್ಗೆ ಮಾಹಿತಿ ನೀಡದೆ ಉಡಾಫೆ ವರ್ತನೆ ತೋರಿದ ವೈದ್ಯೆ ವಿರುದ್ದ ಕ್ರಮ ಕೈಗೊಳ್ಳುವಂತೆ ರೋಗಿ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.

ನಂಜನಗೂಡು ತಾಲ್ಲೂಕು ಗೋಳೂರು ಗ್ರಾಮದ ರಘು ಎಂಬುವರು ದೂರು ನೀಡಿದ್ದಾರೆ. ಬಜಾರ್ ರಸ್ತೆಯಲ್ಲಿರುವ ಬನಶಂಕರಿ ಕ್ಲಿನಿಕ್ ನ ಡಾ.ಕಾವ್ಯಶ್ರೀ ಪಾಟೀಲ್ ವಿರುದ್ದ ದೂರು ನೀಡಿದ್ದಾರೆ. ರಘು ರವರು ಚಿಕಿತ್ಸೆ ಪಡೆಯಲು ಡಾ.ಕಾವ್ಯ ಶ್ರೀ ಪಾಟೀಲ್ ಸಂಪರ್ಕಿಸಿದ್ದಾರೆ. 5 ದಿನ ಚಿಕಿತ್ಸೆ ನೀಡಿದ್ದಾರೆ.ಪ್ರತಿದಿನ 2500/- ಪಡೆದುಕೊಂಡಿದ್ದಾರೆ. ಹೀಗಿದ್ದೂ ರಘು ಗುಣಮುಖರಾಗಿಲ್ಲ.

ಸಮಸ್ಯೆ ಉಲ್ಭಣವಾಗಿ ಚಾಮರಾಜನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತಮಗೆ ನೀಡಿದ ಚಿಕಿತ್ಸೆ ಬಗ್ಗೆ ಮಾಹಿತಿ ಕೇಳಿದಾಗ ಡಾ.ಕಾವ್ಯಶ್ರೀ ಪಾಟೀಲ್ ಉಡಾಫೆ ಉತ್ತರ ನೀಡಿದ್ದಾರೆಂದು ಆರೋಪಿಸಿ ರಘು ರವರು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ತಾಲ್ಲೂಕು ಆರೋಗ್ಯಾಧಿಕಾರಿಗಳು ಸಮಜಾಯಿಷಿ ನೀಡುವಂತೆ ಡಾ.ಕಾವ್ಯಶ್ರೀ ಪಾಟೀಲ್ ರವರಿಗೆ ನೋಟೀಸ್ ನೀಡಿದ್ದಾರೆ.