ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಡಿಸಿಸಿ ) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿ, ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಂಜನಗೂಡು ತಾಲ್ಲೂಕಿನಿಂದ ಚಿನ್ನಂಬಳ್ಳಿ ರಾಜು ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ (ಜಿಲ್ಲಾ) ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜೆ ವಿಜಯಕುಮಾರ್ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ರವರು ಮಾತನಾಡಿ, ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚಿನ್ನಂಬಳ್ಳಿ ರಾಜು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಹಾಗೂ ಅನುಮತಿಯಂತೆ ಕ್ಷೇತ್ರದ ಎಲ್ಲಾ 20 ಬ್ಯಾಂಕಿನ ಸಹಕಾರ ಸಂಘದ ಸಲಹೆಯಂತೆ 26ರಂದು ನಡೆಯಲಿರುವ ಚುನಾವಣೆಗೆ ಕಣಕ್ಕಿಳಿಸಲಾಗಿದೆ ಎಂದರಲ್ಲದೇ, ಎಲ್ಲ ಮತದಾರರ ಆಸೆಯಂತೆ ಈ ಬಾರಿ ಚಿನ್ನಂಬಳ್ಳಿ ರಾಜು ಅವರನ್ನು ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆ ಮಾಡಿಕೊಡಬೇಕೆಂದು ಎಲ್ಲ ಮತದಾರರಲ್ಲಿ ಮನವಿ ಮಾಡಿಕೊಂಡರು.

ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್‌ಸಿ ಬಸವರಾಜ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ,ಕುರಟ್ಟಿ ಮಹೇಶ,ರಂಗಸ್ವಾಮಿ,ಮಾಜಿ ಮೇಯರ್ ಪುಷ್ಪ ಲತಾ ಚಿಕ್ಕಣ್ಣ, ಮುಖಂಡರಾದ. ಬಸವೇಗೌಡ, ಗ್ಯಾರಂಟಿ ಯೋಜನೆಯ ಸಮಿತಿ ಅಧ್ಯಕ್ಷರಾದ ಕೆ .ಮಾರುತಿ. ತಾಲೂಕು ನಾಯಕ ಸಂಘದ ಅಧ್ಯಕ್ಷ ಎಡತಲೆ ನಾಗರಾಜ್. ಸಿದ್ದರಾಮಯ್ಯ ಗೌಡ, ಪರಮ ಶಿವಮೂರ್ತಿ, ರೋಹಿಣಿ ಪುಟ್ಟರಾಜ್, ಬಿಡುಗಲಿ ಪುರುಷೋತ್ತಮ್, ತಿರುಗುಂದ ಶಿವನ ಹಾಗೂ,ಪ್ರಕಾಶ್, ಗಾರ್ಡನ್ ಮಹೇಶ್, ಬಸವರಾಜು,ಮಂಜು, ಪುಟ್ಟಣ್ಣ,ಬಾಲು,ದೇವ ನಾಯಕ, ಆರ್ಕೇಶ್ ಸೇರಿದಂತೆ ನಂಜನಗೂಡು ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.