ಮೈಸೂರು : ಸರಗೂರು ತಾಲೋಕಿನ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಬಿ, ಆರ್, ಗವಾಯಿ ರವರ ಮೇಲೆ ಶೂ ಎಸೆದ ಕಿಡಿಗೇಡಿ ವಕೀಲ ಕಿಶೋರ್ ರಾಕೇಶ್ ನನ್ನು  ಕೂಡಲೇ ಬಂಧಿಸುವಂತೆ ಹಾಗೂ ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಸರಗೂರು ಪಟ್ಟಣದ ಡಾ.ಬಿ. ಆರ್. ಅಂಬೇಡ್ಕರ್ ಭವನ ದಿಂದ ತಹಶಿಲ್ದಾರ್ ಕಛೇರಿ ವರೆಗೆ ಬೃಹತ್ ಪ್ರತಿಭಟನ ಮೆರವಣಿಗೆ ನಡೆಸಲಾಯಿತು.

ಇದೇ ಸಮಯದಲ್ಲಿ ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನಾ ರಾಜಣ್ಣ ಮಾತಾನಾಡಿ ದೇಶದಲ್ಲಿ ಕೋಮುವಾದಿ ಶಕ್ತಿಗಳು ಹೆಚ್ಚಾಗಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ .ಇದರ ಭಾಗವಾಗಿಯೇ ಒಬ್ಬ ಮನುವಾದಿ ಕೀಡಿಗೇಡಿ ವಕೀಲ ಕಿಶೋರ್ ರಾಕೇಶ್ ಎಂಬುವನ್ನು ಈ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗವಾಯ್ ರವರ ಮೇಲೆ ಶೂ ಎಸೆಯುವ ಮೂಲಕ ನ್ಯಾಯಂಗ ವ್ಯವಸ್ಥೆಗೆ ಮಸಿ ಬಳಿದಿದ್ದಾನೆ ಇದನ್ನ ಇಡಿ ದೇಶವೇ ಖಂಡಿಸಬೇಕಾಗಿತ್ತು ಆದರೆ ಕೇವಲ ದಲಿತರು ಮತ್ತು ಶೋಷಿತರು ಮಾತ್ರ ಪ್ರತಿಭಟಿಸುತ್ತಿರುವುದು ನಾಚೀಕೆಗೇಡಿನ ಸಂಗತಿ ಎಂದರು.

ಪ್ರತಿಭಟನೆಯಲ್ಲಿ  ಗ್ರಾಮೀಣ ಮಹೇಶ್, ಹೆಗ್ಗನೂರು ನಿಂಗರಾಜ್, ಸರಗೂರು ಶಿವಣ್ಣ, ಕೃಷ್ಣ, ಮುತ್ತು, ಮರಿದೇವಯ್ಯ, ಮಲಾರ್ ಮಹದೇವ, ಚಿನ್ನಯ್ಯ ಮುಂತಾದವರು ಭಾಗವಹಿಸಿದ್ದರು.