ಮೈಸೂರು: ಅಕ್ರಮ ಮದ್ಯ ಸೇವಿಸಿ ವ್ಯಕ್ತಿ ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪ ಇರುವ ನಾಗಣಪುರ ಆದಿವಾಸಿ ಕಾಲೋನಿಯಲ್ಲಿ ನಡೆದಿದೆ.
ರಾಜು 54 ವರ್ಷದ ಮೃತ ಆದಿವಾಸಿ ವ್ಯಕ್ತಿ ಎಂದು ಗುರುತಿಸಲಾಗಿದೆ. ಪೆಟ್ಟಿ ಮತ್ತು ಗಿರಣಿ ಅಂಗಡಿಗಳಲ್ಲಿ ಸಿಗುವ ಅಕ್ರಮ ಮಧ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿಯೇ ಆದಿವಾಸಿ ಸಾವನ್ನಪ್ಪಿದ್ದಾರೆ.

ಅಕ್ರಮ ಮದ್ಯಕ್ಕೆ ಕಳೆದ 20 ದಿನಗಳ ಹಿಂದೆ ಈರೇಗೌಡನ ಹುಂಡಿ ಗ್ರಾಮದ ಚೆನ್ನಪ್ಪ ಹಾಗೂ ಬಳ್ಳೂರ ಹುಂಡಿ ಗ್ರಾಮದ ಮಹದೇವ ಎಂಬುವವರು ಸಾವನ್ನಪ್ಪಿದ್ದರು. ಇದೀಗ ಅಕ್ರಮ ಮದ್ಯ ಸೇವಿಸಿ ಮೂರನೇ ವ್ಯಕ್ತಿ ಬಲಿಯಾಗಿದ್ದಾರೆ.
ನಂಜನಗೂಡು ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಟಕ್ಕೆ ಕಡಿವಾಣ ಇಲ್ಲದಂತಾಗಿದೆ. ಅಬಕಾರಿ ಅಧಿಕಾರಿಗಳ ನಿರ್ಲಕ್ಷತನದಿಂದ ಗ್ರಾಮೀಣ ಭಾಗದ ಗಿರಣಿ ಅಂಗಡಿಗಳಲ್ಲಿ ಹೆಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.

