ಮೈಸೂರು: ಟ್ರ್ಯಾಕ್ಟರ್ ಮುಗುಚಿ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಿ.ನರಸೀಪುರ ತಾಲ್ಲೂಕಿನ ತಲಕಾಡು ಸಮೀಪದ ಅಕ್ಕೂರು ಗೇಟ್ ಬಳಿ ನಡೆದಿದೆ. ಶ್ರೀ ರಂಗಪಟ್ಟಣದ ಮಹದೇವಪುರದ ನಿವಾಸಿ ಲೋಕೇಶ್(27) ಮೃತ ವ್ಯಕ್ತಿ.

ಟ್ರ್ಯಾಕ್ಟರ್ ನಿಂದ ವಿದ್ಯುತ್ ಕಂಬಗಳನ್ನು ಎತ್ತಿಕೊಂಡು ತಲಕಾಡಿಗೆ ಬರುತ್ತಿದ್ದ ವೇಳೆ ಟ್ರಾಕ್ಟರ್ ಮುಗುಚಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ವ್ಯಕ್ತಿಯ ಮೇಲೆ ಬಿದ್ದು ಸಾವನಪ್ಪಿದ್ದಾನೆ. ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ, ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.