ಮೈಸೂರು: ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಟಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆದಿದೆ. ಲಕ್ಷ್ಮೀಕಾಂತ (55) ಮೃತ ವ್ಯಕ್ತಿ. ಜಮೀನು ವ್ಯಾಜ್ಯ ವಿಚಾರ ಸಹೋದರಿಯರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತನ್ನ ಸಾವಿಗೆ ಸಹೋದರಿಯರಾದ ದಾಕ್ಷಾಯಿಣಿ, ನಳಿನಿ ಮತ್ತು ಭಾವಂದಿರಾದ ದಾಸೇಗೌಡ , ಮತ್ತು ನಾರಾಯಣ ಗೌಡ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿದ್ದಾರೆ. ಎರಡು ದಿನಗಳ ಹಿಂದೆ ನೆಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಸ್ತಿಯಲ್ಲಿ ಪಾಲು ಬೇಕೆಂದು ಸಹೋದರಿಯರ ಕಿರುಕುಳ ನಡೆಯುತ್ತಿತ್ತು. ಈ ಹಿಂದೆಯೇ ಆಸ್ತಿಯಲ್ಲಿ ಪಾಲು ಪಡೆದು ಮತ್ತೆ ಕಿರುಕುಳ ಆರೋಪ ಕೇಳಿಬಂದಿದೆ. ‌

ಕಿರುಕುಳಕ್ಕೆ ಬೇಸತ್ತು ಗ್ರಾಮ ತೊರೆದು ಮೈಸೂರಿನಲ್ಲಿ  ಮೃತ ಲಕ್ಷ್ಮೀಕಾಂತ್ ಕುಟುಂಬ ವಾಸವಿತ್ತು. ನಿರಂತರ ಕಿರುಕುಳದಿಂದ ಬೇಸತ್ತ ತಲಕಾಡಿನ ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಆರೋಪಿಗಳು ತಲೆ ತಪ್ಪಿಸಿಕೊಂಡರು. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.