ಮೈಸೂರು: ಜಗಳ ಬಿಡಿಸಿದ ಕಾರಣ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಪ್ರಕರಣ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರೇಶ್ ಹಲ್ಲೆಗೆ ಒಳಗಾದವರು.ಮಹದೇವಸ್ವಾಮಿ, ಸಾವಿತ್ರಿ,ಪುಟ್ಟಮ್ಮ, ರತ್ನಮ್ಮ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಸುರೇಶ್ ಆಟೋ ಚಾಲಕರಾಗಿದ್ದಾರೆ.ರವಿ ಎಂಬುವರ ಆಟೋ ಓಡಿಸುತ್ತಿದ್ದರು. ರವಿ ರವರ ವಿಜಯನಗರದ ಮನೆಯಲ್ಲಿ ಕೌಟುಂಬಿಕ ವಿಚಾರದಲ್ಲಿ ಗಲಾಟೆ ಆಗಿದೆ. ಪತ್ನಿ ನಾಗರತ್ನ ಎಂಬುವರ ಮೇಲೆ ಸಂಭಂಧಿಕರೇ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ನಾಗರತ್ನರನ್ನ ಆಸ್ಪತ್ರೆಗೆ ಕರೆದೊಯ್ಯಲು ಸುರೇಶ್ ಹೋಗಿದ್ದಾರೆ.
ಈ ವೇಳೆ ಜಗಳ ಬಿಡಿಸಿ ಅರೆಪ್ರಜ್ಞಾವಸ್ತೆಯಲ್ಲಿದ್ದ ನಾಗರತ್ನ ರನ್ನ ಕೆ.ಆರ್.ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ರವಿ ಸಂಭಂಧಿಕರಾದ ಮಹದೇವಸ್ವಾಮಿ,ಸಾವಿತ್ರಿ, ಪುಟ್ಟಮ್ಮ ಹಾಗೂ ರತ್ನಮ್ಮ ರವರು ನೀನು ಯಾರೋ ಜಗಳ ಬಿಡಿಸಲು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆ.ಆರ್.ಆಸ್ಪತ್ರೆ ಆವರಣದಲ್ಲೇ ಹಲ್ಲೆ ನಡೆಸಿದ್ದಾರೆ.
ಸುರೇಶ್ ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಸುರೇಶ್ ಗೂ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಹಲ್ಲೆ ನಡೆಸಿದ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.

