ನಂಜನಗೂಡು: ನಂಜನಗೂಡು ತಾಲ್ಲೂಕು ಹೊಸಕಡಜೆಟ್ಟಿ ಗ್ರಾಮದ ಮಹಿಳೆ ಮಹದೇವಮ್ಮ ರವರ ಅನುಮಾನಾಸ್ಪದ ಸಾವಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ ಮೃತಳ ಮಗಳಿಗೆ 4,12,500/- ರೂ ಮೊತ್ತದ ಚೆಕ್ ಪರಿಹಾರವಾಗಿ ವಿತರಿಸಿದೆ. ಇಲಾಖೆಯ ಅಧಿಕಾರಿ ಸಿದ್ದಲಿಂಗು ರವರು ಚೆಕ್ ಹಸ್ತಾಂತರಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನವೀನ್ ಎಂಬಾತ ಮಹದೇವಮ್ಮ ಮೇಲೆ ಹಲ್ಲೆ ನಡೆಸಿದ್ದ. ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಲು ವಿಳಂಬ ಮಾಡಿದ್ದರು.
ಇದೇ ವೇಳೆ ಮೃತಳ ಮಗಳು ಗೀತಾ ರವರಿಗೆ 20 ಸಾವಿರ ಹಣ ನೀಡಿ ರಾಜಿ ಮಾಡಿಸಲು ಕೆಲವು ಮಧ್ಯವರ್ತಿಗಳು ಯತ್ನಿಸಿದ್ದರು.ಹಣದ ಸಮೇತ ಪೊಲೀಸ್ ಠಾಣೆಗೆ ಬಂದ ಗೀತಾ ತನಗೆ ಹಣದ ಆಮಿಷ ಒಡ್ಡಿದ ಬಗ್ಗೆ ಆರೋಪಿಸಿದ್ದರು. ಹೀಗಿದ್ದೂ ಆರೋಪಿ ವಿರುದ್ದ ಪ್ರಕರಣ ದಾಖಲಿಸದ ಪೊಲೀಸರ ವಿರುದ್ದ ಪ್ರತಿಭಟನೆ ಸಹ ನಡೆದಿತ್ತು.
ಪ್ರತಿಭಟನೆಗೆ ಮಣಿದ ಪೊಲೀಸರು ಆರೋಪಿ ನವೀನ್ ವಿರುದ್ದ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಆರೋಪಿ ಸೆರೆಗೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಪರಿಹಾರದ ಚೆಕ್ ನೀಡಿದೆ. ನಿಯಮಾನುಸಾರ 8 ಲಕ್ಷ ಪರಿಹಾರ ನೀಡಬೇಕಿದೆ.ಉಳಿದ ಹಣವನ್ನ ಕೆಲವು ದಿನಗಳಲ್ಲಿ ನೀಡುವ ಭರವಸೆ ನೀಡಿದ್ದಾರೆ.

