ನಂಜನಗೂಡು : ಸ್ಥಳೀಯರ ಸಮಸ್ಯೆ ಬಗ್ಗೆ ಸ್ಪಂದಿಸುವ ವೇಳೆ ಗೈರಾದ ಪಿಡಿಒಗೆ ಸಂಸದ ಸುನೀಲ್ ಬೋಸ್ ಮೊಬೈಲ್ ನಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮ ಪಂಚಾಯ್ತಿ ಪಿಡಿಒ ರಾಘವೇಂದ್ರಗೆ ಸುನೀಲ್ ಬೋಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊತ್ತನಹಳ್ಳಿ ಆದಿವಾಸಿ ಕಾಲೋನಿಯಲ್ಲಿ ಶಾಲಾ ಕಟ್ಟಡ ಉದ್ಘಾಟನೆಗೆ ಆಗಮಿಸಿದ ಸಂಸದ ಸುನೀಲ್ ಬೋಸ್ ಗೆ ಸ್ಥಳೀಯರು ಸಮಸ್ಯೆಗಳ ಅರ್ಜಿ ನೀಡಿದ್ದಾರೆ.

ಸಂಸದರು ಬಂದರೂ ಪಿಡಿಒ ರಾಘವೇಂದ್ರ ಎಂಬವರು ಗೈರಾಗಿದ್ದರು. ಇದರಿಂದ ಕೆಂಡಾಮಂಡಲವಾದ ಸುನೀಲ್ ಬೋಸ್ ಮೊಬೈಲ್ ನಲ್ಲಿ ಸಂಪರ್ಕಿಸಿ ಗೈರಾದ ಬಗ್ಗೆ ಪ್ರಶ್ನಿಸಿದಾಗ ಕೆಡಿಪಿ ಸಭೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಪಿಡಿಒ ಉತ್ತರಕ್ಕೆ ಗರಂ ಆದ ಸುನೀಲ್ ಬೋಸ್ ನಾನು ಮಾಡದ ಕೆಡಿಪಿ ಸಭೆಯಾ…? ಕೆಡಿಪಿ ಸಭೆಗೆ ಇಒ ಗಳು ಹೋಗಬೇಕು…ನಿನಗೇನು ಕೆಲಸ…ಯಾವ ಪಿಡಿಒ ಕೆಡಿಪಿ ಸಭೆಗೆ ಹೋಗಿದ್ದಾನೆ… ನಾನು ಎಂಪಿ ಇಲ್ಲಿ ಇದ್ದೀನಿ ಸ್ಥಳೀಯರ ಸಮಸ್ಯೆಗೆ ಏನು ಹೇಳೋದು…?ಕಥೆ ಹೇಳಬೇಡ…ನೀವೆಲ್ಲಾ ನಾಟಕ ಆಡ್ತಿದ್ದೀರಾ…?ಯಾರಿಗಯ್ಯ ಹೂವು ಮುಡಿಸ್ತಿದ್ದೀಯ…? ಎಂದು ಎಂ.ಪಿ ಕಿಡಿ ಕಾರಿದರು.