ಮೈಸೂರು: ಹೆಚ್.ಡಿ.ಕೋಟೆ ತಾಲ್ಲೂಕಿನ ಶಾಸಕರಾದ ಅನಿಲ್ ಚಿಕ್ಕಮಾದು ರವರ ಬಗ್ಗೆ ಇತ್ತೀಚೆಗೆ ಕೆಲವೊಂದು ಮಾಧ್ಯಮಗಳಲ್ಲಿ ತಾಲ್ಲೂಕಿನ ವನ್ಯ ಸಂಪತ್ತಿಗೆ ಕುತ್ತು ತರವಂತಹ ಕಾರ್ಯಚಟುವಟಿಕೆಗಳಿಗೆ ರೆಸಾರ್ಟ್ಗಳ ಮಾಲಿಕರಿಗೆ ಅನುವು ಮಾಡಿಕೊಡುತ್ತಿದ್ದಾರೆ ಎಂಬ ಆರೋಪವನ್ನು ಪರಿಸರವಾದಿಗಳು ಆರೋಪವನ್ನು ಮಾಡುತ್ತಾ ಶಾಸಕರ ತೆಜೋವದೆ ಮಾಡುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಸಂಗತಿ.
ಇದರಲ್ಲಿ ಯಾವದೇ ಉರುಳು ಇಲ್ಲ ಆರೋಪ ಮಾಡುವರು ನೇರವಾಗಿ ಚರ್ಚೆಗೆ ಬನ್ನಿ. ಎರಡನೇ ಬಾರಿಗೆ ಅಭೂತಪೂರ್ವ ಗೆಲುವು ಸಾಧಿಸಿ ಮತ್ತೊಮ್ಮೆ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಗಳನ್ನು ಮಾಡಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದ್ದು.
ಇವುಗಳನ್ನು ಸಹಿಸಿದ ಕೆಲವರು ಪಟ್ಟಬದ್ದ ಹಿತಾಶಕ್ತಿಗೆ ಒಳಗಾಗಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂಬುದಾಗಿ ಸರಗೂರು ತಾಲ್ಲೂಕಿನ ಟೌನ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು ರವರು ಹಾಗೂ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಕ್ ಪಿರುಲ್ಲಾ ಅಲ್ಪಸಂಖ್ಯಾತ ಸಮಿತಿ ಇವರು ಜಂಟಿಯಾಗಿ ಇಂದು ಸರಗೂರಿನಲ್ಲಿ ಹೇಳಿಕೆ ನೀಡುವ ಮೂಲಕ ಶಾಸಕರಿಗೆ ಬಲ ತುಂಬುವ ಕೆಲಸ ಮಾಡಿದ್ದಾರೆ.

