ಮೈಸೂರು : ಚಿರತೆ ಬೋನಿಗೆ ಬಿದ್ದಿರುವ ಘಟನೆ ಕೆ.ಆರ್.ನಗರ ತಾಲೂಕಿನ ಮಳಲಿ ಅರಣ್ಯ ವ್ಯಾಪ್ತಿಯಲ್ಲಿರುವ ಹುರುಳಿಕಾಮೇನಹಳ್ಳಿ ಗ್ರಾಮದ ಬಳಿ ಬಿದ್ದಿದೆ.

ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಶುಕ್ರವಾರ ರಾತ್ರಿ ಸುಮಾರು ಮೂರು ವರ್ಷ ಪ್ರಾಯದ ಚಿರತೆ ಬೋನಿಗೆ ಬಿದ್ದಿದೆ. ಸುರಕ್ಷಿತವಾಗಿ ನಾಗರಹೊಳೆಗೆ ಅರಣ್ಯ ಬಿಡಲಾಯಿತು.

