ಮೈಸೂರು : ಜಮೀನು ವಿವಾದ ನಡೆದು ಒಂದೇ ಮನೆಯ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಜಮೀನಿನಲ್ಲೇ ಕುಟುಂಬಸ್ಥರು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಹುಣಸೂರು ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೊದಲ ಹೆಂಡತಿ ಮಗ ಜಮೀನು ಉಳುಮೆ ಮಾಡುವುದನ್ನು ಪ್ರಶ್ನಿಸಿ ಎರಡನೇ ಹೆಂಡತಿ ಮಕ್ಕಳ ಕಿರಿಕ್ ತೆಗೆದಿದ್ದಾರೆ. ಉಳುಮೆ ಮಾಡುತ್ತಿದ್ದ ಮಹೇಶ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಮಹೇಶ್ ಮತ್ತು ಮಗಳು ದಿವ್ಯಗೆ ಗಂಭೀರ ಗಾಯಗಳಾಗಿದೆ. ಮಹೇಶ್ ಬೆನ್ನಿಗೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಜಮೀನಿನಲ್ಲಿ ಪರಸ್ಪರ ಬಡಿದಾಡಿಕೊಳ್ಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏ.9 ರಂದು ಘಟನೆ ನಡೆದಿದ್ದು, ಹಲ್ಲೆ ಮಾಡಿದ ಆರು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಭೈರೇಗೌಡ, ರಂಜಿತ್, ಪ್ರೇಮಮ್ಮ, ತೇಜಸ್ವಿನಿ, ರೇಣುಕಾ ಮತ್ತು ಪುಟ್ಟ ಲಕ್ಷ್ಮಮ್ಮ ಎಂಬುವರ ಮೇಲೆ ಹುಣಸೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

