ನಂಜನಗೂಡು: ಇರಾನ್ ಇಸ್ರೇಲ್ ನಡುವಿನ ಯುದ್ಧದ ಭೀಕರತೆ ಗ್ಯಾಸ್ ಸರಬರಾಜಿಗೆ ಸಾಕಷ್ಟು ಎಡವಟ್ಟು ಮಾಡಿದೆ. ಮೈಸೂರು ಜಿಲ್ಲೆಯಲ್ಲಂತೂ ಗ್ಯಾಸ್ ಅಭಾವ ನಾಗರೀಕರ ನಿದ್ದೆ ಕೆಡಿಸಿದೆ. ಗ್ಯಾಸ್ ಸಪ್ಲೈ ಇಲ್ಲದೆ ಜನ ಪರದಾಡುವಂತಾಗಿದೆ.
ಗ್ಯಾಸ್ಗಾಗಿ ಮಹಿಳೆಯೊಬ್ಬರು 2.5 km ಸಿಲಿಂಡರ್ ಹೊತ್ತು ನಡೆದಿರುವ ಪ್ರಕರಣ ನಂಜನಗೂಡಿನ ಕಳಲೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಸರ್ಕಾರ ಗ್ಯಾಸ್ ಅಭಾವ ಇಲ್ಲವೆಂದು ಹೇಳಿಕೆ ನೀಡಿದೆ.ಆದರೆ ಕೆಲವೆಡೆ ಅಭಾವ ಸೃಷ್ಟಿಸಲಾಗುತ್ತಿದೆ.
ತಲೆ ಮೇಲೆ ಸಿಲಿಂಡರ್ ಹೊತ್ತ ಮಹಿಳೆಯೊಬ್ಬರು 2.5 ಕಿಲೋ ಮೀಟರ್ ನಡೆದಿದ್ದಾರೆ.ಸಮಯಕ್ಕೆ ಗ್ಯಾಸ್ ಸಿಗದೆ ಗ್ರಾಮೀಣ ಭಾಗದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಲೆ ಗ್ರಾಮದಿಂದ ಏಜೆನ್ಸಿವರೆಗೆ ಸಿಲಿಂಡರ್ ಹೊತ್ತುಕೊಂಡು ಹೋದ ಬಡ ಮಹಿಳೆಯ ಯಾತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

