ತಿ. ನರಸೀಪುರ: ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಪಾರ್ಕಿಂಗ್ ಗುತ್ತಿಗೆದಾರರಿಂದ ಸಾರ್ವಜನಿಕರಿಂದ ಹಣ ಸುಲಿಗೆ ನಡೆಯುತ್ತಿದೆ ಎಂದು ಸೇವಾಶ್ರಯ ಫೌಂಡೇಶನ್ ಸಂಸ್ಥಾಪಕ ಗಂಭೀರ ಆರೋಪ ಮಾಡಿದ್ದಾರೆ.

ಎರಡು ದಿನಕ್ಕೆ ದ್ವಿಚಕ್ರ ವಾಹನಕ್ಕೆ 70 ರೂಗಳನ್ನು ಪಡೆದರೆ ಸಾರ್ವಜನಿಕರು ಎಲ್ಲಿಂದ ಬರಿಸಬೇಕು. ಇಂದಿನ ಟಿಸಿ ಅಧಿಕಾರಿಗಳಿಗೆ ದೂರು ಹೇಳಿದರೆ ಇದೇ ರೀತಿ ದೂರುಗಳು ಬಂದಿವೆ ಮೇಲಾಧಿಕಾರಿಗಳ ತಿಳಿಸಿದ್ದೇವೆ ಎಂದು ಸಹಾಯಕರಾಗಿದ್ದಾರೆ.

ಕೆ ಎಸ್ ಆರ್ ಟಿ ಸಿ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಾರೆ ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಸಂಬಂಧಪಟ್ಟ ಕೆ ಎಸ್ ಆರ್ ಟಿ ಸಿ ಇಲಾಖೆಯವರು ಪಾರ್ಕಿಂಗ್ ನಲ್ಲಿ ಹಣ ಸುಲಿಗೆ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಕೆ ಎಸ್ ಆರ್ ಟಿ ಸಿ ಇಲಾಖೆಯವರು ನೀಡಿರುವ ನಿಗದಿ ದರ ಫಲಕವನ್ನು ಸಾರ್ವಜನಿಕವಾಗಿ ಅಳವಡಿಸಬೇಕು ಇಲ್ಲವಾದಲ್ಲಿ ವಿರುದ್ಧವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆರ್ ಮಣಿಕಂಠ ರಾಜ್ ಗೌಡ ಎಚ್ಚರಿಕೆ ನೀಡಿದರು.