ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಸರಗೂರು ಪಟ್ಟಣದ ಹತ್ತನೇ ವಾರ್ಡಿನಲ್ಲಿ ಕೋತಿಯ ಉಪಟಳ ಹೆಚ್ಚಾಗಿದ್ದು ಸಾರ್ವಜನಿಕರು ಭಯದಲ್ಲಿ ಜೀವನ ನಿರ್ವಹಿಸುವಂತೆ ಆಗಿದೆ ವಯಸ್ಕರಂತ ಹಿಡಿದು ವೃದ್ಧರ ತನಕ ಈ ಒಂದು ಕೋತಿಯ ವರ್ತನೆಗೆ ಹೆದರಿದ್ದಾರೆ .
ಮಕ್ಕಳು ಮತ್ತು ವೃದ್ಧರ ಹೆಗಲೇರಿ ಕುಳಿತುಕೊಂಡು ಕಾಟ ಕೊಡುತ್ತಿದೆ ಜನರು ಇದಕ್ಕೆ ಸಂಬಂಧಿಸಿದಂತೆ ಸರಗೂರು ಪಟ್ಟಣ ಪಂಚಾಯಿತಿಯು ಕಾರ್ಯೋನ್ಮುಖರಾಗಿ ಕೋತಿಯನ್ನು ಹಿಡಿಸಿ ಸ್ಥಳಾಂತರಿಸಬೇಕು ಹಾಗೂ ಬೀದಿ ನಾಯಿಗಳ ಉಪಟಳವನ್ನ ತಪ್ಪಿಸಬೇಕೆಂಬುದಾಗಿ ಮನವಿ ಮಾಡಿದ್ದಾರೆ.

