ಮೈಸೂರು: ದಸರಾದಲ್ಲಿ ಕಂಬಳ ನಡೆಸುವ ವಿಚಾರವಾಗಿ ಚಾಮುಂಡಿ ಬೆಟ್ಟದಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ದಸರಾದಲ್ಲಿ ಕಂಬಳ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿಲ್ಲ. ಪರಿಸರಕ್ಕೆ ತೊಂದರೆ ಮಾಡಿ ಕಂಬಳ ಮಾಡುತ್ತಿಲ್ಲ. ಕಂಬಳ ಬೇಡ ಎಂಬ ಕೂಗು ಎದಿದ್ದೆ. ಎಲ್ಲರದರ ಸಾಧಕ ಬಾಧಕಗಳನ್ನ ಸಿಎಂ ಪರಿಶೀಲನೆ ಮಾಡುತ್ತಾರೆ.
ಸಿಎಂ ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ. ಮಾಡಲೇ ಬೇಕೆಂಬ ತೀರ್ಮಾನ ಆಗಿಲ್ಲ. ಕಂಬಳ ಕೂಡ ನಮ್ಮ ಸಂಸ್ಕೃತಿಯ ಭಾಗ. ಅದನ್ನು ಮೈಸೂರು ಭಾಗಕ್ಕೂ ಪ್ರಚಾರ ಮಾಡುವ ದೃಷ್ಟಿಯಿಂದ ಕಂಬಳ ನಡೆಸಲು ಚಿಂತನೆ ಮಾಡಿದ್ದೇವೆ ಎಂದರು.

