ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಜೆಸಿಬಿಯ ಘರ್ಜನೆ ನಡೆಯುತ್ತಿದ್ದು, ಬೆಟ್ಟದಲ್ಲಿ  ಹಾಕಿದ್ದ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ಅಕ್ರಮವಾಗಿ ಪುಟ್ ಬಾತ್ ನಲ್ಲಿ ನಿರ್ಮಾಣ ಮಾಡಿದ್ದ 10ಕ್ಕೂ ಹೆಚ್ಚು ಅಂಗಡಿಗಳ ತೆರವುಗೊಳಿಸಲಾಗಿದೆ. ಚಾಮುಂಡಿ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ರೂಪ ಆದೇಶದಂತೆ ತೆರವುಗೊಳಿಸಲಾಗಿದೆ.

ಅಕ್ರಮವಾಗಿ ಹಾಕಿದ್ದ ಅಂಗಡಿಗಳಿಗೆ  ಅಧಿಕಾರಿಗಳು ನೋಟಿಸ್ ನೀಡಿದ್ದರು. ಯಾವುದಕ್ಕೂ ಉತ್ತರಿಸಿದ ಹಿನ್ನಲೆ ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.