ಮೈಸೂರು: ವಿಶ್ವ ವಿಖ್ಯಾತ ದಸರಾ ಜಂಬೂಸವಾರಿ ಎಂಟ್ರಿ ಪಾಸ್ ಗೋಲ್ಮಾಲ್ ಆಗಿದ್ದು, ಬಡವರಿಗೆ ಒಂದು ನ್ಯಾಯ ಪ್ರಭಾವಿಗಳಿಗೆ ಒಂದು ನ್ಯಾಯವಾಗಿದೆ. ರಾಜಕಾರಣಿಗಳು, ಪ್ರಭಾವಿಗಳ ಕೈಗೆ ದಸರಾ ಪಾಸ್ಗಳು ಸೇರಿದೆ.
ದಸರಾ ಪಾಸ್ ಬಡವರ ಕೈಲಿದ್ರೆ ಪೊಲೀಸರಿಗೆ ನಾಲ್ಕು ಕಣ್ಣು. ಪ್ರಭಾವಿಗಳ ಕೈಲಿ ದಸರಾ ಪಾಸ್ ಇದ್ರೆ ಪೊಲೀಸರ ಕಣ್ಣು ಕುರುಡು ಎಂಬಾತಾಗಿದೆ. ಜನಸಾಮಾನ್ಯರಿಗಿಲ್ಲದ ದಸರಾ ಪಾಸ್ಗಳು ಸಾವಿರಾರು ದಸರಾ ಪಾಸ್ ಇಟ್ಟುಕೊಂಡು ಯುವಕ ರೀಲ್ಸ್ ಮಾಡಿದ್ದಾನೆ.
ಜೆಡಿಎಸ್ ಯುವ ಮುಖಂಡ ಬೆಳವಾಡಿ ರವಿಕುಮಾರ್ ಎಂಬುವನಿಗೆ ಪಾಸ್ ಗಳು ಕೈ ಸೇರಿದ್ದು, ದಸರಾ ಪಾಸ್ ಹಿಡಿದು ರೀಲ್ಸ್ ಮಾಡಿರುವುದು ಪ್ರಭಾವಿಗಳಿಗೆ ಮಾತ್ರ ದಸರಾ ಎಂಬುದು ಮತ್ತೆ ಸಾಬೀತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದ್ದು, ಹೇಳೋರಿಲ್ಲಾ ಕೇಳೋರಿಲ್ಲಾ ಎಂಬಂತಾಗಿದೆ.

