ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿಗೆ ಕೊಳಚೆ ನೀರಿನ ಸಮಸ್ಯೆಯಿಂದ ಮುಕ್ತಿಯೇ ದೊರೆಯುತ್ತಿಲ್ಲ.ನಗರದ ಬಹುತೇಕ ಸ್ಥಳಗಳಲ್ಲಿ ಕೊಳಚೆ ನೀರು ನಿಂತು ಮಾರಣಾಂತಿಕ ಖಾಯಿಲೆಗೆ ಆಸ್ಪದ ನೀಡುತ್ತಿದ್ದರೂ ಅಧಿಕಾರಿಗಳಿಗೆ ನಮಗೇನೂ ತಿಳಿದೇ ಇಲ್ಲ ಎಂಬಂತೆ ಡ್ರಾಮಾ ಮಾಡ್ತಿದ್ದಾರೆ.ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ.
ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿಯ ದೇವೀರಮ್ಮನಹಳ್ಳಿ ಬಡಾವಣೆಯಲ್ಲಿ ನಿಂತಿರುವ ಕೊಳಚೆ ನೀರು ದುರ್ವಾಸನೆ ಬೀರುತ್ತಿದೆ.ಸ್ಥಳೀಯರು ಹೈರಾಣರಾಗಿದ್ದಾರೆ.ಕೊಳಚೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಇಲ್ಲದೆ ಅಪಾರ ಪ್ರಮಾಣದಲ್ಲಿ ನಿಂತಿದೆ. ಹಲವಾರು ದಿನಗಳಿಂದ ನಿಂತಿರುವ ಕೊಳಚೆ ನೀರು ದುರ್ಗಂಧ ಬೀರುತ್ತಿದೆ. ಕೆಟ್ಟವಾಸನೆಯಿಂದಾಗಿ ಸ್ಥಳೀಯರು ಬೇಸತ್ತಿದ್ದಾರೆ.
ಸಮಸ್ಯೆಗೆ ಪರಿಹಾರ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಮಾರಣಾಂತಿಕ ಖಾಯಿಲೆಗೆ ಆಹ್ವಾನ ನೀಡುತ್ತಿದ್ದರೂ ಜಡ್ಡು ಹಿಡಿದ ಅಧಿಕಾರಿಗಳು ಸೈಲೆಂಟ್ ಆಗಿರುವುದು ಸ್ಥಳೀಯರ ನೆಮ್ಮದಿ ಕೆಡಿಸಿದೆ. ಪ್ರತಿಭಟನೆ ಹಾದಿ ಹಿಡಿಯುವ ಮುನ್ನ ಕೊಳಚೆ ನೀರಿನ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.

