ಮೈಸೂರು: ಫೇಸ್ ಬುಕ್ ಮೂಲಕ ಪರಿಚಯವಾದ ಲಂಡನ್ ನಿವಾಸಿಯೊಬ್ಬ ಮೈಸೂರಿನ ಗೃಹಿಣಿಗೆ 12.65 ಲಕ್ಷ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶಕ್ತಿನಗರದ ನಿವಾಸಿ ಸರ್ಕಾರಿ ಉದ್ಯೋಗಿ ಪತ್ನಿ ವೇದಾ(40) ಹಣ ಕಳೆದುಕೊಂಡವರು.
2025 ರಲ್ಲಿ ಫೇಸ್ ಬುಕ್ ಮೂಲಕ ಡಾ.ಜೋಸೆಫ್ ಆಲಿ ಎಂಬಾತ ವೇದಾ ರವರಿಗೆ ಪರಿಚಯವಾಗಿದ್ದಾನೆ.ತಾನು ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ವೇದಾಗೆ ತನ್ನ 9 ವರ್ಷದ ಮಗನನ್ನೂ ಪರಿಚಯಿಸಿದ್ದಾನೆ.ಮಗು ಹಾಗೂ ವೇದಾ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ.
ನಂತರದ ದಿನಗಳಲ್ಲಿ ಡಾ.ಜೋಸೆಫ್ ಆಲಿ ಹಾಗೂ ವೇದಾ ನಡುವೆಯೂ ಉತ್ತಮ ಬಾಂಧವ್ಯ ಬೆಳೆದಿದೆ. ತಾನು ಇಂಡೋನೇಷಿಯಾಗೆ ಹೋಗುತ್ತಿದ್ದೇನೆ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಟಿಕೆಟ್ ಖರೀದಿಸಲು ಹಣ ಸಹಾಯ ಕೇಳಿದ್ದಾನೆ. ವಿವಿದ ಹಂತಗಳಲ್ಲಿ 1,85,000/- ವರ್ಗಾಯಿಸಿದ್ದಾರೆ. ಕೆಲವು ದಿನಗಳ ನಂತರ ನಾನು ಇಂಡಿಯಾಗೆ ಬಂದಿರುವುದಾಗಿ ತಿಳಿಸಿ 25 ಲಕ್ಷ ನಿಮ್ಮ ಖಾತೆಗೆ ವರ್ಗಾಯಿಸುತ್ತಿರುವುದಾಗಿ ವೇದಾ ರವರನ್ನ ನಂಬಿಸಿದ್ದಾನೆ.
ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಚಾರ್ಜಸ್ ಎಂದು 10,80,000/- ಪೀಕಿದ್ದಾನೆ. ಇದಾದ ನಂತರ ಮತ್ತೆ 1,55,000/- ವರ್ಗಾಯಿಸುವಂತೆ ಕೇಳಿದಾಗ ವೇದಾರವರಿಗೆ ಅನುಮಾನ ಬಂದಿದೆ. ನಂತರ ವಂಚಕ ಸಂಪರ್ಕ ಕಳೆದುಕೊಂಡಿದ್ದಾನೆ. ಒಟ್ಟು 12.65 ಲಕ್ಷ ಹಣ ಕಳೆದುಕೊಂಡ ವೇದಾ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

