ತಿ. ನರಸೀಪುರ: ಸಿ.ಎಂ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ಟಿ ನರಸೀಪುರ ಪಟ್ಟಣದ ಪುರಸಭೆ ವ್ಯಾಪ್ತಿಯ ವಿದ್ಯಾನಗರದ ವಾರ್ಡ್ ನಂಬರ್ 12ರಲ್ಲಿ ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ.

ಪುರಸಭಾ ವ್ಯಾಪ್ತಿಯ ವಾರ್ಡ್ ನಂ.12ರಲ್ಲಿ ಸ್ವಚ್ಛತೆ, ರಸ್ತೆ,ಒಳ ಚರಂಡಿ, ಕುಡಿಯುವ ನೀರು, ಚರಂಡಿ, ಸೇರಿದಂತೆ ಮೂಲಭೂತ ಸೌಕರ್ಯ ಮರೀಚಿಕೆಯಾಗಿದ್ದು, ವಿದ್ಯಾನಗರದ ನಿವಾಸಿಗಳು ದಿನ ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದರು.

ಒಳಚರಂಡಿ, ಚರಂಡಿ, ಇಲ್ಲದೆ ಕೊಳಚೆ ನೀರು ಎಲ್ಲೂ ಹೋಗದೆ ಅಲ್ಲೇ ನಿಂತಲ್ಲೇ ನಿಂತು ಕೊಳಚೆ ನಿರ್ಮಾಣವಾಗಿ ಗಿಡಗಳು ಬೃಹತ್ ಗಾತ್ರದಲ್ಲಿ ಬೆಳೆದು, ಸೊಳ್ಳೆಗಳ ಕಾಟ ವಿಪರೀತವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ. ಸೌಜನ್ಯಕ್ಕಾದರೂ ಸೊಳ್ಳೆಗಳನ್ನು ನಿಯಂತ್ರಿಸಲು ಮಾತ್ರ ಯಾವುದೇ ರೀತಿಯಿಂದ ಕ್ರಮಕೈಗೊಂಡಿಲ್ಲ. ಮುನ್ನೆಚ್ಚರಿಕೆ ಒಳಚರಂಡಿ ನಿರ್ಮಾಣ ಮಾಡುವಂತೆ ನಿವಾಸಿಗಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಇಲ್ಲಿಯವರೆಗೂ ಸಹ ಯಾವುದೇ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು.

ಸಿದ್ದರಾಮಯ್ಯನವರು ಎರಡು ಬಾರಿ ಸಿಎಂ ಆಗಲು ವರ್ಣ ಕ್ಷೇತ್ರದ ಜನತೆ ಕಾರಣಕರ್ತರಾಗಿದ್ದಾರೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಕೊರತೆ ಎಂದರೆ ನಾಚಿಗೇಡಿನ ಸಂಗತಿ ಎಂದು ನಿವಾಸಿ ಸಿದ್ದಲಿಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿಯವರೆಗೂ ತಾಳ್ಮೆಯಿಂದ ಮೂಲಭೂತ ಸೌಕರ್ಯ ಒದಗಿಸುತ್ತಾರೆ ಎಂದು ಮೌನವಾಗಿದ್ದೆವು ಮೂಲಭೂತ ಸೌಕರ್ಯದ ಕಾಮಗಾರಿಗಳು ತ್ವರಿತವಾಗಿ ಆಗದಿದ್ದಲ್ಲಿ ವಿದ್ಯಾನಗರ ನಿವಾಸಿಗಳು ಪುರಸಭೆ ಮುಂಭಾಗ ಅನಿರ್ದಿಷ್ಟ ಅವಧಿ ಮುಷ್ಕರದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ನಿವಾಸಿಗಳಾದ ಕೆಇಬಿ ನಿವೃತ್ತ ಸಿದ್ದಲಿಂಗಸ್ವಾಮಿ, ಶಶಿಧರ್, ಡ್ರೈವರ್ ಮಹದೇವ್, ನಂದೀಶ್, ಮಲ್ಲಿಕಾರ್ಜುನ, ನಾಗರಾಜು, ಸೇರಿದಂತೆ ವಿದ್ಯಾ ನಗರದ ಹಲವಾರು ನಿವಾಸಿಗಳು ಇದ್ದರು.