ಮೈಸೂರು : ಕೇರಳದ ವೈಯನಾಡಿನಲ್ಲಿ ಜೋರು ಮಳೆ ಹಿನ್ನಲೆ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲಿರುವ ಕಬಿನಿ ಜಲಾಶಯಕ್ಕೆ 18513 ಸಾವಿರ ಕ್ಯೂಸೆಕ್ ಒಳ ಹರಿವು ಬಿಡಲಾಗಿದೆ.
84 ಅಡಿ ಸಾಮರ್ಥ್ಯದ ಕಬಿನಿ ಜಲಾಶಯ ಹೊಂದಿದ್ದು, ಪ್ರಸ್ತುತ ಜಲಾಶಯದಲ್ಲಿ 2274.87 ಅಡಿ ನೀರು ಸಂಗ್ರಹವಾಗಿದೆ. 19.52 ಟಿಎಂಸಿ ನೀರನ್ನ ಸಂಗ್ರಹಿಸುವ ಸಾಮರ್ಥ್ಯವನ್ನು ಕಬಿನಿ ಜಲಾಶಯ ಹೊಂದಿದೆ.
ಸದ್ಯ ಜಲಾಶಯದಲ್ಲಿ 14.20 ಟಿಎಂಸಿ ನೀರು ಸಂಗ್ರಹವಾಗಿದೆ. ವರ್ಷಕ್ಕೆ ಎರಡು ಭಾರಿ ತುಂಬುವ ರಾಜ್ಯದ ಏಕೈಕ ಜಲಾಶಯ ಕಬಿನಿ ಜಲಾಶಯವಾಗಿದೆ. ಮೈಸೂರು, ಬೆಂಗಳೂರು, ಚಾಮರಾಜನಗರ ಜಿಲ್ಲೆಗೆ ಕಬಿನಿ ಜಲಾಶಯ ನೀರನ್ನ ಪೂರೈಸುತ್ತದೆ.

