ಮೈಸೂರು : ಹುಲಿ ಉಪಟಳ ಮೈಸೂರು ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಗುರುಪುರ ಗ್ರಾಮದಲ್ಲಿ ಹುಲಿ ಮರಿ ಸೆರೆಯಾಗಿದ್ದು, ಮರಿಯನ್ನು ರಕ್ಷಣೆ ಮಾಡಲಾಗಿದೆ.
ಗ್ರಾಮಸ್ಥರಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿ ಹುಲಿ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು. ಸುರಕ್ಷಿತ ಸ್ಥಳಕ್ಕೆ ಹುಲಿ ಮರಿಯನ್ನು ರವಾನೆ ಮಾಡಲಾಯಿತು.
ಗುರುಪುರ ಗ್ರಾಮಸ್ಥರ ಸಹಕಾರದೊಂದಿಗೆ ಹುಲಿ ಸೆರೆ ಕಾರ್ಯಾಚರಣೆ ಯಶಸ್ವಿಯಾಯಿತು. ಕಳೆದ ವಾರ ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ತಾಯಿ ಹುಲಿ ಸೇರಿ ನಾಲ್ಕು ಮರಿ ಹುಲಿಗಳ ಸೆರೆ ಹಿಡಿಯಲಾಗಿತ್ತು.

