ಮೈಸೂರು : ಕೇರಳದ ವೈನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಕಬಿನಿ ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್ ಒಳ ಹರಿವಾಗಿದ್ದು, ಎಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲಿರುವ ಕಬಿನಿ ಜಲಾಶಯದಲ್ಲಿ ಈ ಘಟನೆ ನಡೆದಿದೆ.

84 ಅಡಿ ಸಾಮರ್ಥ್ಯದ ಕಬಿನಿ ಜಲಾಶಯವಾಗಿದ್ದು, ಸದ್ಯ ಜಲಾಶಯದಲ್ಲಿ 63.52 ಅಡಿ ನೀರು ಸಂಗ್ರಹವಾಗಿದೆ. 19.52 ಟಿಎಂಸಿ ನೀರನ್ನ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ 8.72 ಟಿಎಂಸಿ ನೀರು ಸಂಗ್ರಹವಾಗಿದೆ.

ವರ್ಷಕ್ಕೆ ಎರೆಡು ತುಂಬುವ ರಾಜ್ಯದ ಏಕೈಕ ಜಲಾಶಯ ಕಬಿನಿ ಜಲಾಶಯವಾಗಿದೆ. ಮೈಸೂರು, ಬೆಂಗಳೂರು, ಚಾಮರಾಜನಗರ ಜಿಲ್ಲೆಗೆ ಕಬಿನಿ ಜಲಾಶಯದಿಂದ ನೀರನ್ನು ಪೂರೈಸಲಾಗುತ್ತದೆ.