ತಿ. ನರಸೀಪುರ: ಪುರಸಭೆ ಕಚೇರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಯನ್ನು ಪುರಸಭೆ ಅಧ್ಯಕ್ಷೆ ವಸಂತಶ್ರೀಕಂಠ ಮುಖ್ಯಅಧಿಕಾರಿ ವಸಂತಕುಮಾರಿ ಪುರಸಭಾ ಸದಸ್ಯರುಗಳೊಡನೆ ಉದ್ಘಾಟನೆ ನೆರವೇರಿಸಿದರು.

ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಮಾತನಾಡಿ ನಾನು ಸ್ಥಾಯಿ ಸಮಿತಿ ಅಧ್ಯಕ್ಷರಾಗಲು ಕಾರಣಕರ್ತರಾದ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ರಿಗೆ ಅಭಿನಂದನೆ ತಿಳಿಸಿದರು.

ಅಂಬೇಡ್ಕರ್, ಬುದ್ಧ, ಬಸವ, ರವರ ಆಶಯದಂತೆ ಪುರಸಭಾ ಸದಸ್ಯರೆಲ್ಲರ ಸಹಕಾರದೊಂದಿಗೆ ಎಲ್ಲರಲ್ಲೂ ಸಮಾನತೆಯಿಂದ ಸಾರ್ವಜನಿಕ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.