ತಿ. ನರಸೀಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ ಮತ್ತು ಪತ್ರಿಕಾ ದಿನಾಚರಣೆ ನಡೆಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ನೂತನ ಕಾರ್ಯನಿರತ ಪತ್ರಕರ್ತ ಸಂಘದ  ಕಛೇರಿ ಉದ್ಘಾಟನೆ ನೆರವೇರಿಸಿದರು.

ಸುದ್ದಿಗೋಷ್ಠಿ ಸಭಾಂಗಣದ  ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ನಾಮಫಲಕವನ್ನು ವಿಧಾನ ಪರಿಷತ್ ಸದಸ್ಯ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಸಂಪಾದಕರು ಕೆ ಬಿ ಗಣಪತಿ, ಆಂದೋಲನ ಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ರವರ ಭಾವಚಿತ್ರಕ್ಕೆ ಗಣ್ಯರೊಂದಿಗೆ  ಮೈಸೂರು ಜಿಲ್ಲಾ  ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭ  ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿ,ದಾ.ರಾ ಮಹೇಶ್, ಗ್ರಾಮಾಂತರ ಉಪಾಧ್ಯಕ್ಷ ವೆಂಕಟಪ್ಪ, ಹುಲ್ಲಹಳ್ಳಿ ಮೋಹನ್, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಅಕ್ರಂಪಾಷ, ಉಪಾಧ್ಯಕ್ಷ ನಂಜುಂಡಯ್ಯ, ಪ್ರಧಾನ ಕಾರ್ಯದರ್ಶಿ ಆಲಗೂಡು  ರೇವಣ್ಣ, ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್,  ಪದಾಧಿಕಾರಿಗಳು ಸದಸ್ಯರು ಸದಸ್ಯರು ಸೇರಿದಂತೆ ಇತರರು ಇದ್ದರು.