ಮೈಸೂರು: ನಗರದ ಅತ್ಯಂತ ಪ್ರಮುಖ ಗಣೇಶೋತ್ಸವಗಳಲ್ಲೊಂದಾದ ಶ್ರೀ ಮಾಧವ ಕೃಪಾ ಗಣೇಶೋತ್ಸವ ಈ ಬಾರಿ ಅಪರೂಪದ ಕ್ಷಣಗೆಳಿಗೆ ಸಾಕ್ಷಿಯಾಯಿತು. ಸೋಮವಾರ ಆರಂಭವಾದ ಈ ಗಣೇಶೋತ್ಸವವನ್ನು ಖ್ಯಾತ ಸಿರಿ ಧಾನ್ಯ ತಜ್ಞ ಪದ್ಮಶ್ರೀ ಪುರಸ್ಕೃತ “ಮಿಲೆಟ್ ಮ್ಯಾನ್” ಡಾ. ಖಾದರ್ ವಾಲಿ ಉದ್ಘಾಟಿಸಿದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾಗಿ ಬಂದ ದಾರಿಯ ಪ್ರದರ್ಶಿನಿಯನ್ನು ಖ್ಯಾತ ವೈದ್ಯ ಡಾ. ಜಾವೇದ್ ನಯೀಮ್ ( Dr Javed Nayeem) ಉದ್ಘಾಟಿಸಿದರು. ಇವರೊಂದಿಗೆ ಹಲವರು ಮುಸ್ಲಿಂ ಸಹೋದರರು ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರದರ್ಶಿನಿ ಉದ್ಗಾಟಿಸಿ ಮಾತನಾಡಿದ ವೈದ್ಯ ಡಾ. ಜಾವೇದ್ ನಯೀಮ್, “ಕೋಮು ಸೌಹಾರ್ದತೆ ನನ್ನ ಬಾಲ್ಯದ ಕನಸು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು, “ಎಂದು ಅವರು ತಿಳಿಸಿದರು. “ಏಕತೆ ನಮ್ಮ ಶಕ್ತಿ. ಸೌಹಾರ್ದತೆ ನಮ್ಮೆಲ್ಲರ ಅಭಿವೃದ್ಧಿಗೆ ಪೂರಕ,” ಎಂದು ಅವರು ಹೇಳಿದರು.

“ಸಂಘ ಪರಿವಾರದ ಬಗ್ಗೆ ಅರಿತುಕೊಂಡಷ್ಟು ಅದರ ಬಗ್ಗೆಗಿನ ತಪ್ಪು ಅಭಿಪ್ರಾಯಗಳು ನಿವಾರಣೆ ಆಗುತ್ತವೆ. ನಮ್ಮ ನಡುವೆ ಒಗ್ಗಟ್ಟು ಮೂಡುತ್ತದೆ,” ಎಂದರು. “ಸಂಘ ಪರಿವಾರದ ಬಗ್ಗೆ ಅರಿತುಕೊಳ್ಳದೆ ಟೀಕಿಸುವುದು ಸರಿಯಲ್ಲ. ಅದರ ಸೇವೆಯನ್ನು ಅರಿತುಕೊಂಡಾಗ ಸಂಘದ ಪ್ರಾಮುಖ್ಯತೆ- ಶಕ್ತಿ ಹಾಗು ರಾಷ್ಟ್ರ ನಿರ್ಮಾಣದಲ್ಲಿ ಅದರ ಪಾತ್ರದ ಅರಿವಾಗುತ್ತದೆ,” ಎಂದರು.

“ಆರ್ ಎಸ್ ಎಸ್ ಬಗ್ಗೆಗಿನ ಈ ಪ್ರದರ್ಶನಿ, ಬಹಳ ಮಹತ್ವದ್ದು. ನಾನು ಚಿಕ್ಕಂದಿನಿಂದಲೂ ಎಲ್ಲರ ಏಕತೆಯ ಕನಸು ಕಂಡವನು. ಈ ಪ್ರದರ್ಶಿನಿಯ ಸಂದೇಶ ಅಂತ್ಯಂತ ಮಹತ್ವದ್ದು. ಅದು ನಮ್ಮ ಸಮಾಜಕ್ಕೆ ಬಹಳ ಸಂದೇಶ ನೀಡುತ್ತಿದೆ. ಸೌಹಾರ್ದತೆ ದೇಶದ ಶಕ್ತಿ ಮತ್ತು ಅತ್ಯಗತ್ಯ,” ಎಂದು ಅವರು ತಿಳಿಸಿದರು.

“ಮಿಲೆಟ್ ಮ್ಯಾನ್” ಡಾ. ಖಾದರ್ ವಾಲಿ ಮಾತನಾಡಿ, ಸುಸ್ಥಿರ ಕೃಷಿ ಹಾಗು ಸುಸ್ಥಿರ ಆಹಾರ ಪದ್ಧತಿ ಈಗಿನ ತುರ್ತು ಎಂದರು. ಮೀಟ್ ಪ್ರೊಟೀನ್ ದುಷ್ಪರಿಣಾಮ ಬಗ್ಗೆ ವಿವರಿಸಿದ ಅವರು, ಸಿರಿ ಧಾನ್ಯಗಳು, ವೇಗಾನ್ ಪ್ರೊಟೀನ್ ನಮ್ಮ ಆರೋಗ್ಯಕ್ಕೆ ಪೂರಕ. ಈ ಬಗ್ಗೆ ಚಿಂತನ-ಮಂಥನ ನಡೆಯಬೇಕು,” ಎಂದರು.

“ಸುಸ್ಥಿರ ಜೀವನ ಕ್ರಮದಲ್ಲಿ ಸಿರಿಧಾನ್ಯಗಳ ಪಾತ್ರ ಅತಿ ದೊಡ್ಡದು,” ಎಂದು ಅವರು ಅಭಿಪ್ರಾಯಪಟ್ಟರು. ಸನಾತನ ಧರ್ಮದ ಆಚರಣೆಗಳು, ಸಾರ್ವಕಾಲಿಕ ಮೌಲ್ಯ ಹೊಂದಿವೆ. “ಇಲ್ಲಿ ಪ್ರತಿಯೊಂದು ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತದೆ. ಇದನ್ನು ಎಲ್ಲರೂ ಅರಿತುಕೊಂಡರೆ, ಬದುಕಿನ ಸಾರ್ಥಕತೆ ಸಾಧ್ಯ,” ಎಂದರು.

ಚಾಮರಾಜನಗರ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಎಂ ಆರ್ ಗಂಗಾಧರ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಾಲಕೃಷ್ಣೇ ಗೌಡ, ದರ್ಶನನ್ ರಾಜ್, ವಾಸುದೇವ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.