ಮೈಸೂರು: ಕೆಲಸ ಇಲ್ಲದವರ ಆರೋಪಕ್ಕೆ ಉತ್ತರ ಕೊಡಲ್ಲ ಎಂಬ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಗೆ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ.

ಕೆಲಸ ಅಂದರೆ ಬರೀ ವರ್ಗಾವಣೆ ಮಾಡಿಸೋದಾ? ವರ್ಗಾವಣೆ ಲಿಸ್ಟ್ ಕೊಟ್ಟು ಅಪ್ಪ ಅಪ್ಪ ನಾ ಕೊಟ್ಟಿರೋದು ಅಷ್ಟೆ ಮಾಡಿ ಅನ್ನೋದು ಮಾತ್ರ ಕೆಲಸಾನಾ? ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಮ್ಯಾಟ್ರಿಕ್ಸ್ ಲ್ಯಾಬ್ ಹೆಸರಲ್ಲಿ ಹಣ ಮಾಡೋದೆ ಕೆಲಸನಾ? ನೀವು ಜಸ್ಟ್ ಎಂಎಲ್ಸಿ. ನೀವು ಯಾವ ಕೆಪಾಸಿಟಿ ಮೇಲೆ ವರ್ಗಾವಣೆ ಮಾಡಿಸುತ್ತೀರಾ? ಯತೀಂದ್ರ ಅವರೇ ನಿಮ್ಮಂಥ ಕೆಲಸವನ್ನು ನಾನು ಯಾವತ್ತೂ ಮಾಡಲ್ಲ.

ವರ್ಗಾವಣೆ ದಂಧೆ ಕೆಲಸ ನಿಮಗೆ ಇರಲಿ. ನಿಮ್ಮ ಅಪ್ಪಾನೂ ನಾಲ್ಕು ಬಾರಿ ಚುನಾವಣೆಯಲ್ಲಿ ಸೋತಿದ್ದರು. ಆಗ ಅವರನ್ನು ಕೆಲಸ ಇಲ್ಲದವರು ಅಂತೀದ್ರಾ? ನಂಗೆ ಟಿಕೆಟ್ ತಪ್ಪಿದೆ ಅಷ್ಟೆ. ಅಸ್ಲೇಂಬಿಗೆ ಮೈಸೂರಿನಿಂದಲೇ ಗೆದ್ದು ಬರ್ತಿನಿ. ಅವತ್ತು ನೀವು ಎಲ್ಲಿ ಇರುತ್ತೀರಾ ನೋಡ್ತಿನಿ.ಹಿಂಬಾಗಲಿನಿಂದ ನಿಮ್ಮ ರೀತಿ ಅಸೆಂಬ್ಲಿ ಗೆ ಬರುವ ಜಾಯಮಾನ ನನ್ನದ್ದಲ್ಲ. ಯತೀಂದ್ರ ಹೆಸರಿನ ಹಿಂದೆ ಸಿದ್ದರಾಮಯ್ಯ ಅಂತಾ ಇರದೆ ಇದ್ದಿದ್ದರೆ ನಿಮ್ಮನ್ನು ಯಾವ ಎಕ್ಕಣ್ಣ, ಸೀನಣ್ಣನೂ ಕ್ಯಾರೆ ಅಂತೀರಲಿಲ್ಲ.

ಅಪ್ಪನ ಹೆಸರಿಂದ ಅಸ್ತಿತ್ವಕ್ಕೆ ಉಳಿಸಿ ಕೊಂಡ ನೀವು ನಂಗೆ ಪಾಠ ಹೇಳಬೇಡಿ.ನಿಮ್ಮ ಅಪ್ಪ ಅರಾಮಾಗಿ ಬೆಂಗಳೂರಿನಿಂದ ಮೈಸೂರಿಗೆ ಓಡಾಡುತ್ತಿರುವ ರಸ್ತೆ ಮಾಡಿಸಿದ್ದು ಈ‌ ಪ್ರತಾಪ್ ಸಿಂಹ ಅನ್ನೋದು ನೆನಪಿರಲಿ. ನಿಮ್ಮ ಅಪ್ಪ ಮೈಸೂರಿಗೆ ಒಂದು ಈ ರೀತಿಯ ರೋಡ್ ಮಾಡಿಸಿದ್ದಾರಾ ಹೇಳಿ.ಯಾರೋ ಛೇಲಾ ಗಳ ಕೈಯಲ್ಲಿ ಪ್ರತಾಪ್ ಸಿಂಹ ವರುಣದಿಂದ ಸ್ಪರ್ಧೆ ಮಾಡಲಿ ಎಂದು ಹೇಳಿಸುತ್ತಿದ್ದೀರಾ. ಸಿದ್ದರಾಮಯ್ಯ ಗೆ ತಾಖತ್ ಇದ್ದರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ ಎಂದು ವಾಗ್ಧಾಳಿ ನಡೆಸಿದರು.