ಮೈಸೂರು: ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯೋ ವಿಚಾರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ತೆಗೆದ್ರೆ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ ಎಂದು ಸಿದ್ದರಾಮಯ್ಯ ಪರ ವಾಟಾಳ್ ನಾಗರಾಜ್ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯ ತೆಗೆದು ಎನ್ರಪ್ಪ ಮಾಡ್ತೀರಾ. ಸಿಎಂ ಸ್ಥಾನಕ್ಕೆ ಒಂದು ಘನತೆ ಬೇಡವಾ. ಸಿದ್ದರಾಮಯ್ಯ ಬಿಟ್ರೆ ಬೇರೆ ಯಾರಾಗ್ತಾರೆ ಸಿಎಂ.ಈಗಲೂ ಅವರೇ ಸಿಎಂ ಆಗಿರ್ತಾರೆ. 2028ಕ್ಕೂ ಅವರೇ ಮುಂದುವರಿಯಲಿ ಬಿಡಿ.ಸಿದ್ದರಾಮಯ್ಯಗೆ ದೇವರು ಒಳ್ಳೆ ಆರೋಗ್ಯ ಕೊಟ್ಟು ಮುಂದುವರೆಯಲಿ.

ನಾನು ಸಿದ್ದರಾಮಯ್ಯ ಪರ ಅಂತ ಏನಿಲ್ಲಾ.ಇರೋ ಸಿಎಂ ಗಳಲ್ಲಿ ಸಿದ್ದರಾಮಯ್ಯ ಉತ್ತಮ ಸಿಎಂ.ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಕೆಳಗಿಳಿಯಲ್ಲ. ಸಿದ್ದರಾಮಯ್ಯ ಬಿಟ್ಟರೆ ಇತರೆ ನಾಯಕರಿಗೆ ಉಳಿಗಾಲವಿಲ್ಲ.ನೀವ್ಯಾರು ರಾಜಕೀಯದಲ್ಲಿ ಇರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯಗೆ ಮಾಟ ಮಂತ್ರ ಎಲ್ಲಾ ನಡೆಯಲ್ಲ. ಸಿದ್ದರಾಮಯ್ಯ ಅಂದ್ರೆ ಸುಮ್ಮನೆ ಅಲ್ಲ. ಸಿದ್ದರಾಮಯ್ಯಗೆ ಎಲ್ಲವು ಗೊತ್ತು. ಎಲ್ಲಿ ಮ್ಯಾಜಿಕ್ ಮಾಡಬೇಕು ಅಲ್ಲಿ ಮಾಡ್ತಾರೆ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

View this post on Instagram

A post shared by News Karnataka (@newskarnataka)