ಮೈಸೂರು: ಧರ್ಮಸ್ಥಳ ಪ್ರಕರಣದಲ್ಲಿ ಸಾವಿರ ಸರಿ ಸುಳ್ಳು ಹೇಳಿದರೂ ಸತ್ಯ ಆಗಲ್ಲ. ಈ ಮಾತಿಗೆ ಧರ್ಮಸ್ಥಳ ಪ್ರಕರಣವೇ ತಾಜ ನಿದರ್ಶನ ಎಂದು ಸಚಿವ ವಿ.ಸೋಮಣ್ಣ ಮೈಸೂರಲ್ಲಿ‌ ಹೇಳಿಕೆ ನೀಡಿದ್ದಾರೆ.

ಯಾರ್ ಯಾರೋ‌, ಏನ್ ಏನೋ‌ ಹೇಳಿದ್ರು, ಆದರೆ ಸತ್ಯ ಏನು ಅಂತ ಹೊರಗೆ ಬಂದಿದೆ. ಎಸ್‌ಐಟಿ‌ ರಚನೆಯಾದಾಗ ಮೊದಲು ಸ್ವಾಗತಿಸಿದ್ದೆ ನಾನು. ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ತೊಡೆಯುತ್ತಿದೆ. ಅಣ್ಣಪ್ಪಸ್ವಾಮಿ, ಮಂಜುನಾಥಸ್ವಾಮಿ ಕೆಡಕು ಬಯಸಿದರೆ ಸದ್ಭುದ್ಧಿ ಕೊಡಲಿ ಎಂದರು.

ಆ ದೇವರಿಗೆ ನಮ್ಮ ಪ್ರಣಾಮಗಳು, ಈಗ ಆಗಿರುವುದೇ ಸಾಕು. ಸರ್ಕಾರ ಪಶ್ಚಾತ್ತಾಪಪಟ್ಟುಕೊಳ್ಳಲಿ. ಮುಂದೆಯಾದರೂ ಧಾರ್ಮಿಕ ತಾಣಗಳ ಬಗ್ಗೆ ಯಾರೇ ಮಾತನಾಡುವಾಗಲೂ ಎಚ್ಚರಿಕೆ ವಹಿಸಬೇಕು. ನಾನು ಮೊದಲಿನಿಂದಲೂ ಕೂಡ ಧರ್ಮಸ್ಥಳದ ಪರ ನಿಂತಿದ್ದೆ, ಎಂದು ಸಚಿವ ವಿ.ಸೋಮಣ್ಣ ಹೇಳಿದರು.