ಮೈಸೂರು: ಧಮ್ಮ ಪಯಣದ ಹಾದಿಯಲ್ಲಿ ಮಾನವ ಮೈತ್ರಿ ಸಂಪದ ಸಮ್ಮೇಳನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು.

ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಶಾಸಕರಾದ ದರ್ಶನ್ ಧ್ರುವನಾರಾಯಣ್, ಶ್ರೀವತ್ಸ, ಹರೀಶ್ ಗೌಡ, ತಿ.ನರಸೀಪುರದ ಬುದ್ಧ ವಿಹಾರದ ಶ್ರೀ ಸುಗಜಪಾಲ ಬಂತೇಜಿ, ಕೊಳ್ಳೆಗಾಲದ ಶ್ರೀ ಗೌತಮಿ ಬಂತೇಜಿ , ಹೋರಾಟಗಾರ ಅಹಿಂದ ಜವರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.