ಮೈಸೂರು: ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.

ಸಂಧ್ಯಾ (30) ಮೃತ ದುರ್ದೈವಿ. ಹುಣಸೂರು ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಪುತ್ರಿ ಸಂಧ್ಯಾ. ಸರಸ್ವತಿ ಪುರಂ ಜವರೇಗೌಡ ಪಾರ್ಕ್ ಸಮೀಪದ ಸಮೀಪದ ನಿವಾಸ. ಟೀಕೆ ಲೇಔಟ್ ಮಹದೇವ್ ಪುತ್ರ ಅಕ್ಷಯ್ ಗೆ ಕೊಟ್ಟು ವಿವಾಹ ಮಾಡಲಾಗಿತ್ತು.

ಗಂಡ ಹೆಂಡತಿ ನಡುವೆ ಪದೇ ಪದೇ ಜಗಳ ನಡೆಯುತ್ತಿದ್ದು, ಪತಿ ಪತ್ನಿ ನಡುವೆ ಗಲಾಟೆ ಹಿನ್ನಲೆ, ಪೋಷಕರಿಂದ ಕೊಲೆ ಆರೋಪ ಕೇಳಿಬಂದಿದೆ. ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.