ಮೈಸೂರು: ನಾಲ್ಕನೇ ಮಹಡಿಯಿಂದ ಹಾರಿ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿಜಯನಗರದ ಮರಿಮಲ್ಲಪ್ಪ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ವಿಧ್ಯಾರ್ಥಿನಿಯಾಗಿರುವ ತಾಯಿ ಪ್ರೀತಿ(30) ಆತ್ಮಹತ್ಯೆಗೆ ಶರಣಾದವರು. ಪ್ರೀತಿ ಹಲವು ದಿನಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ.
ಟೀಚರ್ ಪೇರೆಂಟ್ಸ್ ಮೀಟಿಂಗ್ ಅಟೆಂಡ್ ಮಾಡಿದ್ದ ಪ್ರೀತಿರವರು ನಂತರ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರೀತಿ ರವರ ಇಬ್ಬರು ಹೆಣ್ಣುಮಕ್ಕಳು ಮರಿಮಲ್ಲಪ್ಪ ಶಾಲೆ ವಿದ್ಯಾರ್ಥಿನಿಯರಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

