ಮೈಸೂರು: ನಗರ ಪೊಲೀಸ್ ಕಚೇರಿಯಲ್ಲಿ ಹೋಂ ಮಿನಿಸ್ಟರ್ ಮಗನ ದರ್ಬಾರ್ ಪ್ರಶ್ನಿಸುವಂತಾಗಿದೆ. ಕಛೇರಿ ಬಾಗಿಲಿಗೆ ಐಷಾರಾಮಿ ಕಾರು ತಂದು ನಿಲ್ಲಿಸಿಕೊಂಡ ಗೃಹ ಸಚಿವರ ಮಗನ ವರ್ತನೆ ಟೀಕೆಗೆ ಗುರಿಯಾಗಿದೆ.
ಕಚೇರಿ ಬಾಗಿಲಿನಲ್ಲಿ ಕಮಿಷನರ್ ಕಾರ್ ಬಿಟ್ಟು ಬೇರೆ ಯಾವ ಕಾರುಗಳ ಪಾರ್ಕಿಂಗ್ ಅವಕಾಶ ಇಲ್ಲ. ಆದ್ರು ತನ್ನ ಐಷಾರಾಮಿ ವಾಹನ ಹಾಗೂ ತನ್ನ ಬೆಂಬಲಿಗರ ವಾಹನ ಎಲ್ಲವನ್ನೂ ಕಚೇರಿಯ ಬಾಗಿಲಿಗೆ ತಂದು ನಿಲ್ಲಿಸಿಕೊಂಡ ವಿಡಿಯೋ ವೈರಲ್ ಆಗಿದೆ.

