ಮೈಸೂರು : ಐಟಿ ದಿಗ್ಗಜರ ಟ್ವೀಟ್ ಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜಕಾರಣದ ಲೇಪನ ಬಳಿದಿದ್ದಾರೆ. ಒಂದೆರೆಡು ರಸ್ತೆಗಳು ಗುಂಡಿ ಬಿದ್ದದ್ದನ್ನ ಇಟ್ಟುಕೊಂಡು ಇಮೇಜ್ ಕೆಡಿಸುವ ರಾಜಕಾರಣ ಮಾಡಬೇಡಿ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ನಾನು ಯಾರು ಎಂದು ಬಾಯಿ ಬಿಟ್ಟು ಹೇಳುತ್ತಿಲ್ಲ ಅಷ್ಟೇ. ಮಳೆಯಿಂದ ರಸ್ತೆಗಳು ಹಾಳಾಗಿರುವುದು ಸತ್ಯ. ರಸ್ತೆಗಳ ರಿಪೇರಿ ಕಾರ್ಯ ನಡೆಯುತ್ತಿದೆ. ಇದನ್ನೇ ಇಟ್ಟುಕೊಂಡು ಟ್ವೀಟ್ ಗಳನ್ನ ಮಾಡಬೇಡಿ.
ಯಾರು ಏನೇ ಮಾಡಿದರು ಬ್ರ್ಯಾಂಡ್ ಬೆಂಗಳೂರಿನ ಇಮೇಜ್ ಕೆಡಿಸಲು ಸಾಧ್ಯವಿಲ್ಲ. ಗೂಗಲ್ ಕಂಪನಿ ಆಂದ್ರಕ್ಕೆ ಹೋಗಲು ಅವರದ್ದೇ ಆದ ಕಾರಣಗಳು ಇವೆ. ಇದೇ ಕಾರಣಗಳಿಗೆ ಅವರು ಹೋಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ನಾವು ಎಲ್ಲಾ ಮೂಲಭೂತ ಸೌಕರ್ಯಗಳನ್ನ ಕಲ್ಪಿಸು ಕೆಲಸ ಮಾಡುತ್ತಿದ್ದೇವೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ. ಎಲ್ಲರನ್ನು ಕರೆದು ಮಾತನಾಡಿಸುತ್ತೇವೆ. ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಮೈಸೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ ನೀಡಿದ್ದಾರೆ.

