ಮೈಸೂರು: ಪ್ರಧಾನಿ ನರೇಂದ್ರ ಮೋದಿ 75ನೇ ಜನ್ಮ ದಿನ ಆಚರಣೆ ಅಂಗವಾಗಿ ಇಂದು ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ  ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಮೈಸೂರು ಬಿಜೆಪಿ ವತಿಯಿಂದ ಪೂಜೆ ಹೋಮ, ಹವನ ಲೋಕ ಶಾಂತಿಗಾಗಿ ಸಂಕಲ್ಪ ಪೂಜೆ ನಡೆಯಿತು. ನರೇಂದ್ರ ಮೋದಿ ಪರ ಕಾರ್ಯಕರ್ಯರು ಹಾಗೂ ಮುಖಂಡರು ಘೋಷಣೆ ಕೂಗಿ  ಶುಭಕೋರಿದರು.

ಸಂಸದ ಯದುವೀರ್ ಬಿಜೆಪಿ ಶಾಸಕ ಶ್ರೀವತ್ಸ ಹಾಗೂ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಭಾವಚಿತ್ರ ಹಿಡಿದು ಹೋಮದಲ್ಲಿ ಭಾಗಿಯಾದರು. ಭಕ್ತರಿಗೆ ಸಂಸದ ಯದುವೀರ್, ಶಾಸಕ ಶ್ರೀವತ್ಸ್,ಮಾಜಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.