ನಂಜನಗೂಡು: ನಂಜನಗೂಡು ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಛೇರಿಯಲ್ಲಿ ಗುರುವಾರ ಕಾರ್ಮಿಕ ದಿನಾಚರಣೆ ಅಂಗವಾಗಿ ಅರೋಗ್ಯ ವಿಮಾ ಕಾರ್ಡ್, ಸುರಕ್ಷಾ ಕವಚ ಸಾಧನಗಳನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕ ಇಂಜಿನಿಯರ್ ಆನಂದ್ ರವರು ವಿತರಿಸಿ ಮಾತನಾಡಿದರು.

ವಿದ್ಯುತ್ ಇಲಾಖೆಯ ವಿಭಾಗಗಳಲ್ಲಿ ಇಡೀ ಕರ್ನಾಟಕದಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದೆ. ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಮೊದಲು ಪವರ್ ಮ್ಯಾನ್ ಗಳಿಗೆ ತಿಳಿಯುತ್ತದೆ. ನಿಮ್ಮ ಹಂತದಲ್ಲಿ ಸಮಸ್ಯೆಗಳು ಬಗೆಹರಿದಾಗ ಮಾತ್ರ ಗ್ರಾಹಕರಿಗೆ ಉತ್ತಮ ಸೇವೆ ದೊರಕುತ್ತದೆ.

ಮುಖ್ಯವಾಗಿ ರೈತರ ಸಮಸ್ಯೆಗಳಿಗೆ ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡಬೇಕು. ಹಾಗೆಯೇ ನಿಮ್ಮ ಕರ್ತವ್ಯದ ಜೊತೆಗೆ ಸುರಕ್ಷತೆ ಮುಖ್ಯ. ಆದ ಕಾರಣ ಇಂದು ಜಿಲ್ಲೆಯ ಎಲ್ಲಾ ವಿಭಾಗಗಳಲ್ಲೂ ನೌಕರರಿಗೆ 2 ಲಕ್ಷದ ವರೆಗೆ ನಗದು ರಹಿತ ಅರೋಗ್ಯ ಕಾರ್ಡ್ ಹಾಗೂ ಸುರಕ್ಷಾ ಸಾಧನ ಗಳನ್ನು ನೀಡಲಾಗುತ್ತಿದ್ದೂ ಇದರ ಸದುಪಯೋಗ ಪಡೆದುಕೊಂಡು ಉತ್ತಮ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೇವರಾಜಯ್ಯ, ಅಧಿಕಾರಿಗಳಾದ ಕಿರಣ್, ಧನಂಜಯ್, ರವಿಕುಮಾರ್, ಕಿರಣ್ ಕುಮಾರ್, ವೀರೇಶ್, ಹರ್ಷ, ರಘು, ರಜಿನಿ, ರಂಗಸ್ವಾಮಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಹಾಜರಿದ್ದರು.