ಮೈಸೂರು: ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಬೋವಿ ಎಂಬುದನ್ನು ಬೋಯಿ ಎಂದು ತಿದ್ದಿದ ಆರೋಪದ ಹಿನ್ನಲೆ ಶಾಲೆ ಮುಖ್ಯಶಿಕ್ಷಕ ಅಮಾನತು ಪಡಿಸಲಾಗಿದೆ.
ಮೈಸೂರಿನ ಹೆಚ್.ಡಿ.ಕೋಟೆ ರಾಜೇಗೌಡನಹುಂಡಿ ಮುಖ್ಯ ಶಿಕ್ಷಕ ಶ್ರೀನಿವಾಸ ಅಮಾನತುಗೊಂಡರು. ಪ್ರಭಾವಿ ರಾಜಕಾರಣಿಯೊಬ್ಬರು ಚಂದ್ರಮ್ಮ ಎಂಬ ಬೋವಿ ಸಮುದಾಯದ ಮಹಿಳೆಗೆ ಸೇರಿದ ಭೂಮಿ ಕಬಳಿಸಲು ಮುಖ್ಯಶಿಕ್ಷಕರಿಂದ ದಾಖಲೆ ತಿದ್ದಿಸಿದ ಆರೋಪ ಇವರ ಮೇಲಿದೆ.
ಚಂದ್ರಮ್ಮ ಮತ್ತವರ ಕುಟುಂಬಕ್ಕೆ ತಹಶೀಲ್ದಾರ್ ನೀಡಿದ್ದ ಜಾತಿ ಪ್ರಮಾಣ ಪತ್ರ ಮತ್ತು ಮೂಲ ಶಾಲಾ ದಾಖಲೆ ಹಾಜರು ಪಡಿಸಿದ ಚಂದ್ರಮ್ಮ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ದೂರು ಸ್ವೀಕರಿಸಿದ ಬಿಇಒ ರಾಜು ಶಾಲಾ ದಾಖಲಾತಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.
ಘಟನೆ ಕುರಿತು ಡಿಡಿಪಿಐಗೆ ಬಿಇಒ ರಾಜು ವರದಿ ನೀಡಿದ್ದರು. ವರದಿ ಆಧಾರದ ಮೇಲೆ ಮುಖ್ಯ ಶಿಕ್ಷಕನನನು ಅಮಾನತ್ತುಗೊಳಿಸಿ ಡಿಡಿಪಿಐ ಆದೇಶಿಸಿದರು. ನಿವೃತ್ತಿಗೆ ಇನ್ನು ಕೇವಲ 2ವರ್ಷ ಬಾಕಿ ಇರುವಾಗ ಮುಖ್ಯಶಿಕ್ಷಕ ಅಮಾನತುಗೊಂಡಿದ್ದಾರೆ.

