ತಿ. ನರಸೀಪುರ: ಸೋಮಣ್ಣ ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವಾಟಾಳು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಚುನಾವಣೆ ನಡೆಸಲಾಯಿತು
ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಪಿ ಪುಟ್ಟಬುದ್ದಿಯರವರನ್ನು ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸಿದ ಕಾರಣ ಎಚ್. ಪಿ ಪುಟ್ಟಬುದ್ದಿಯವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ನೀರಾವರಿ ಇಲಾಖೆ ಎಸ್ ಮಂಜುನಾಥ್ ಘೋಷಣೆ ಮಾಡಿದರು.
ಈ ಸಂದರ್ಭ ಉಪಾಧ್ಯಕ್ಷೆ ಆಶಾ, ಮಾಜಿ ಅಧ್ಯಕ್ಷ ಸೋಮಣ್ಣ ಗ್ರಾ. ಪಂ ಸದಸ್ಯರುಗಳು ಸೇರಿದಂತೆ ಮುಖಂಡರುಗಳಾದ ತಾಪಂ ಅಧ್ಯಕ್ಷ ಯಾಕನೊರು ಉಮೇಶ್, ಮಷ್ಣೇಗೌಡ, ರವಿ ಸೇರಿದಂತೆ ಇತರರು ಇದ್ದರು.

